ಬಿಬಿಎಂಪಿ 
ಜಿಲ್ಲಾ ಸುದ್ದಿ

ಪಾಲಿಕೆ ತ್ರಿವಿಭಜನೆ: ಶೀಘ್ರ ಸಲ್ಲಿಕೆಯಾಗಲಿದೆ ವಿಧಾನ ಪರಿಷತ್‍ನ ಸೆಲೆಕ್ಟ್ ಕಮಿಟಿ ವರದಿ

ಬಿಬಿಎಂಪಿ ಮೂರು ಭಾಗ ಮಾಡುವ ವಿಚಾರ ಸಂಬಂಧ ವಿಧಾನ ಪರಿಷತ್‍ನ ಸೆಲೆಕ್ಟ್ ಕಮಿಟಿ ಶೀಘ್ರದಲ್ಲೇ ತನ್ನ ವರದಿ ನೀಡಲಿದೆ ಎಂದು ಐಟಿಬಿಟಿ ಸಚಿವ ಎಸ್. ಆರ್.ಪಾಟೀಲ್ ಹೇಳಿದ್ದಾರೆ.

ಬೆಂಗಳೂರು: ಬಿಬಿಎಂಪಿ ಮೂರು ಭಾಗ ಮಾಡುವ ವಿಚಾರ ಸಂಬಂಧ ವಿಧಾನ ಪರಿಷತ್‍ನ ಸೆಲೆಕ್ಟ್ ಕಮಿಟಿ ಶೀಘ್ರದಲ್ಲೇ ತನ್ನ ವರದಿ ನೀಡಲಿದೆ ಎಂದು ಐಟಿಬಿಟಿ ಸಚಿವ ಎಸ್. ಆರ್.ಪಾಟೀಲ್ ಹೇಳಿದ್ದಾರೆ.

ಪ್ರದೇಶ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿದ ಅವರು ಗುರುವಾರ ಈ ವಿಷಯ ತಿಳಿಸಿದ್ದು, ಈಗಾಗಲೇ ಕಮಿಟಿ ನಾಲ್ಕು ಬಾರಿ ಸಭೆ ನಡೆಸಿದೆ. ದೆಹಲಿ, ಮುಂಬಯಿ ಮಹಾನಗರ ಪಾಲಿಕೆಯ ಕಾರ್ಯವೈಖರಿ ಬಗ್ಗೆಯೂ ವರದಿ ತರಿಸಿಕೊಳ್ಳಲಾಗಿದೆ. ಆದಷ್ಟು ಬೇಗ ವರದಿ ನೀಡಲಾಗುವುದು ಎಂದರು. ಬಿಬಿಎಂಪಿ ತ್ರಿಭಾಗ, ವಾರ್ಡಗಳ ಮರು ವಿಂಗಡಣೆ ನೆಪದಲ್ಲಿ ಚುನಾವಣೆ ಯನ್ನು ಮುಂದೂಡಲು ಸರ್ಕಾರ ಪ್ರಯತ್ತಿ ಸುತ್ತಿದೆ ಎಂಬ ಆರೋಪ ನಿರಾಧಾರ. ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು ಸರ್ಕಾರ ಅದಕ್ಕೆ ಬದ್ಧವಾಗಿದೆ ಎಂದರು.

ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಅದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಬಹುಶಃ ಮೇಲಿಂದ ಮೇಲೆ ಜರುಗಿದ ಚುನಾವಣೆಗಳು ವಿಳಂಬಕ್ಕೆ ಕಾರಣವಾಗಿರಬಹುದು.ಪಕ್ಷದ ವರಿಷ್ಠರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು. ಕೆಜಿಐಎಸ್: ಉಪಗ್ರಹ ಛಾಯಾಚಿತ್ರದ ಮೂಲಕ ಅರಣ್ಯ, ಜಲ-ಚರ, ಬೆಳೆ ಪದ್ದತಿ, ಖನಿಜ ಸಂಪತ್ತು ಮುಂತಾದ ವಿಚಾರಗಳ ಬಗ್ಗೆ ಅತ್ಯಂತ ನಿಖರ ಮಾಹಿತಿಯನ್ನು ಒದಗಿಸುವ ಭೌಗೋಳಿಕ ಮಾಹಿತಿ ವ್ಯವಸ್ಥೆ  (ಕರ್ನಾಟಕ ಜಿಯೋಸ್ಪೇಶಿಯಲ್ ಇನ್ಫೋರ್ಮೇಶನ್ ಸಿಸ್ಟಮ್-ಕೆಜಿಐಎಸ್) ಜಾರಿಗೊಳಿಸಲಾಗುತ್ತಿದೆ.  ಇದಕ್ಕಾಗಿ ರು.150 ಕೋಟಿ ವೆಚ್ಚ ಮಾಡಲಾಗುತ್ತಿದೆ. ಇದು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷ ಹಾಗೂ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿರಂಗನ್ ಅವರ ಕನಸಿನ ಕೂಸು. ಅವರ ಕನಸು ಈಗ ನಿಜವಾಗುತ್ತಿದೆ. ಇದರಿಂದ ದೊರೆಯುವ ನಿಖರ ಮಾಹಿತಿಯ ನೆರವಿನಿಂದ ವಸ್ತುನಿಷ್ಠ ವಾಸ್ತವ ಯೋಜನೆಗಳನ್ನು ತಯಾರಿಸಬಹುದಾಗಿದೆ. ಕರ್ನಾಟಕವು ಜಿಐಎಸ್ ತಂತ್ರಜ್ಞಾನ ಅಳವಡಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಕೆಗೆ ಕಾರಣವಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!