ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಶೀಘ್ರ ಒಂದೇ ರಕ್ತನಿಧಿ ಜಾಲ

ರಾಜ್ಯದಲ್ಲಿರುವ ರಕ್ತ ನಿಧಿ ಕೇಂದ್ರಗಳನ್ನು ಇನ್ನು ಮೂರು ತಿಂಗಳಲ್ಲಿ ಆಧುನೀಕರಣಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ರಕ್ತ ನಿಧಿ
Srinivasa Murthy VN
Updated On : 19 Jun 2015, 2:53 am

ಬೆಂಗಳೂರು: ರಾಜ್ಯದಲ್ಲಿರುವ ರಕ್ತ ನಿಧಿ ಕೇಂದ್ರಗಳನ್ನು ಇನ್ನು ಮೂರು ತಿಂಗಳಲ್ಲಿ ಆಧುನೀಕರಣಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಆರೋಗ್ಯ ಇಲಾಖೆ ಏರ್ಪಡಿಸಿದ್ದ ರಕ್ತದಾನಿಗಳ ದಿನಾಚರಣೆಯಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ 156 ರಕ್ತ ನಿಧಿ ಕೇಂದ್ರಗಳಿದ್ದು, ಅವುಗಳನ್ನು ಆಧುನೀಕರಣ ಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಇದು ಪೂರ್ಣವಾಗುತ್ತಿದ್ದಂತೆ ಎಲ್ಲಾ ರಕ್ತ ನಿಧಿ ಕೇಂದ್ರಗಳು ಒಂದೇ ಜಾಲದೊಳಗೆ ಬರುತ್ತದೆ. ಇದರಿಂದ ರಕ್ತ ದಾನ ಮತ್ತು ಸಂಗ್ರಹಣೆ ಎರಡಕ್ಕೂ ಅನುಕೂಲ ವಾಗುತ್ತದೆ ಎಂದು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ಪ್ರತಿ ದಿನ ರಾಜ್ಯದಲ್ಲಿ 4 ಕೋಟಿ ಯುನಿಟ್ ರಕ್ತದ ಅಗತ್ಯವಿದೆ. ಪ್ರತಿ 2 ನಿಮಿಷಕ್ಕೆ 1 ಯುನಿಟ್ ರಕ್ತದ ಬೇಡಿಕೆ ಇದೆ.

ಆದ್ದರಿಂದ ಯುವ ಜನತೆ ನಿರ್ಭೀತಿಯಿಂದ ರಕ್ತದಾನ ಮಾಡುವ ಮೂಲಕ ಅಗತ್ಯತೆ ಮತ್ತು ಲಭ್ಯತೆ ನಡುವಿನ ಅಂತರ ಕಡಿಮೆ ಮಾಡಬೇಕು ಎಂದು ಹೇಳಿದರು. ಇದೇ ವೇಳೆ, ಆರೋಗ್ಯ ಇಲಾಖೆ ಕಾರ್ಯದರ್ಶಿ ಅತುಲ್‍ಕುಮಾರ್ ತಿವಾರಿ ರಕ್ತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಈತನಕ 125 ಬಾರಿ ರಕ್ತದಾನ ಮಾಡಿರುವ ಎಚ್.ವಿ.ಸಂತೋಷ ಕುಮಾರ್ ಜೈನ್, 124  ಬಾರಿ ರಕ್ತದಾನ ಮಾಡಿರುವ ಡಾ.ಬಿ.ಸುಭಾಷ್, 84 ಬಾರಿ ರಕ್ತದಾನ ಮಾಡಿದ ಡಾ.ಸಿ.ಎ.ಹಿರೇಮಠ , 60 ಬಾರಿ ರಕ್ತ ದಾನ ಮಾಡಿರುವ ಸಂಜಯ್ ಪಾಟೀಲ್, ಇರ್ಷಾದ್ ಬೇಗಂ, ರೂಪ ಮಾದವ್ ದೇಶಪಾಂಡೆ, ಮಧುರಾ ಅಶೋಕ್, ರೂಪಶ್ರೀ, ಸೈದಾ  ಸೈದಾ ಶಿಬಾ, ಉಮೆ ಸಲ್ಮಾ ಅವರನ್ನು ಸಮಾರಂಭದಲ್ಲಿ ಪುರಸ್ಕರಿಸ ಲಾಯಿತು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ  300ಕ್ಕೂ ಹೆಚ್ಚು ಕಾರ್ಯಕರ್ತರು ರಕ್ತದಾನ ಮಾಡಿದರು. ನರ್ಸಿಂಗ್, ಪ್ಯಾರಾ ಮೆಡಿಕಲ್ ಕಾಲೇಜು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement