ಕೇರಳದ ಕಾಪ್ಪಾಡ್ ಬೀಚ್ 
ಜಿಲ್ಲಾ ಸುದ್ದಿ

ಮೈಸೂರು ಮೂಲದ ಮೂವರು ಕೇರಳ ಸಮುದ್ರದಲ್ಲಿ ಮುಳುಗಿ ಸಾವು

ಕರ್ನಾಟಕ ಮೂಲದ 3 ಮಂದಿ ಕೇರಳದ ಕಾಪ್ಪಾಡ್ ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕಲ್ಲಿಕೋಟೆ: ಕರ್ನಾಟಕ ಮೂಲದ 3 ಮಂದಿ ಕೇರಳದ ಕಪ್ಪಾಡ್ ಬೀಚ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೇರಳದ ಪ್ರಮುಖ ಪ್ರವಾಸಿ ಕೇಂದ್ರ ಕಾಪ್ಪಾಡ್ ಬೀಚ್‌ನಲ್ಲಿ ಸ್ನಾನ ಮಾಡುತ್ತಿದ್ದ ಕರ್ನಾಟಕದ ಒಂದೇ ಕುಟುಂಬದ ಮೂವರು ನೀರು ಪಾಲಾಗಿದ್ದಾರೆ. ಮೈಸೂರು ಮೂಲದ ವೆಂಕಟ ನಾರಾಯಣನ್ (51), ಮಗ ಇಂದುಧರ್ (24) ಹಾಗೂ ಚಿಕ್ಕಪ್ಪ ಬೆಂಗಳೂರಿನ ಆರ್.ವಿ.ವೆಂಕಟೇಶ್ (50) ಎಂಬುವವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕುಟುಂಬದ ಒಟ್ಟು 14 ಮಂದಿ ಕೇರಳಕ್ಕೆ ಪ್ರವಾಸಕ್ಕಾಗಿ ಬಂದಿದ್ದರು. ಇವರೆಲ್ಲ ಸಮುದ್ರದಲ್ಲಿ ಸ್ನಾನಕ್ಕೆಂದು ಇಳಿದಿದ್ದರು. ಈ ಪೈಕಿ 3 ಮಂದಿ ಮಾತ್ರ ಸ್ವಲ್ಪ ಆಳದ ನೀರಿಗೆ ಹೋಗಿದ್ದರು.

ಆದರೆ ನೀರಿನ ರಭಸ ಜಾಸ್ತಿಯಿದ್ದಿದ್ದರಿಂದ ಮೂವರು ಅಲ್ಲೇ ಮುಳುಗಲಾರಂಭಿಸಿದ್ದಾರೆ. ಕೂಡಲೇ ಅವರು ಸಹಾಯಕ್ಕಾಗಿ ಕೂಗಾಡಿದರು. ಕೂಗಾಟ ಕೇಳಿದ ಸಮೀಪದಲ್ಲಿದ್ದ ಮೀನುಗಾರರು ಧಾವಿಸಿ ಬಂದು ಮೂವರನ್ನೂ ತೀರಕ್ಕೆ ತರುವಲ್ಲಿ ಯಶಸ್ವಿಯಾದರು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರನ್ನು ಬದುಕಿಸಲಾಗಲಿಲ್ಲ. ಸ್ವಲ್ಪ ಸಮಯದಲ್ಲೇ ಮೂವರೂ ಕೊನೆಯುಸಿರೆಳೆದರು ಎಂದು  ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!