ಬೀದರ್: ಬಿಬಿಎಂಪಿ ಚುನಾವಣೆಗೆ ಸಮುಂದೂಡುವ ಯಾವುದೇ ಯೋಚನೆ ಸರ್ಕಾರಕ್ಕೆ ಇಲ್ಲ. ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದ್ದರಿಂದ ವಿಭಜನೆ ಮಾಡಿದ ನಂತರ ಚುನಾವಣೆ ನಡೆಸಲು ತಯಾರಿ ಮಾಡಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೀದರ್‍ನಿಂದ ಹುಮನಾಬಾದ್‍ಗೆ ತೆರಳುವ ಮಾರ್ಗ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿ, ಬಿಬಿಎಂಪಿ ಚುನಾವಣೆಯಲ್ಲಿ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ. ಇಲ್ಲಿನ ಜನಸಂಖ್ಯೆ ಸುಮಾರು 1 ಕೋಟಿ ದಾಟಿದ್ದರಿಂದ ಇದನ್ನು ವಿಭಜನೆ ಮಾಡಿದ ನಂತರ ಮಾಡಬೇಕು ಎಂಬ ಚಿಂತನೆ ನಡೆಸಲಾಗಿತ್ತು. ನ್ಯಾಯಾಲಯ ಆದೇಶ ಹೊರಡಿಸಿ ರುವುದರಿಂದ ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.