(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಮಹಿಳೆ ಚಿತ್ರ ತೆಗೆದವನಿಗೆ ಗೂಸಾ

ಮಹಿಳಾ ಸಿಬ್ಬಂದಿಯ ಅನುಮತಿ ಇಲ್ಲದೇ ಆಕೆಯ ಫೋಟೋ ಸೆರೆ ಹಿಡಿದು ಅಸಭ್ಯವಾಗಿ ವರ್ತಿಸುತ್ತಿದ್ದ ಬಟ್ಟೆ ಮಳಿಗೆ ಮಾಲೀಕನಿಗೆ ಸಾರ್ವಜನಿಕರು ಹಾಗೂ ಸಂಘಟನೆಯೊಂದರ ಸದಸ್ಯರು ಹಿಡಿದು ಥಳಿಸಿರುವ ಘಟನೆ ಮಾಗಡಿ ರಸ್ತೆ ತಾವರೆಕೆರೆಯಲ್ಲಿ ನಡೆದಿದೆ...

ಬೆಂಗಳೂರು: ಮಹಿಳಾ ಸಿಬ್ಬಂದಿಯ ಅನುಮತಿ ಇಲ್ಲದೇ ಆಕೆಯ ಫೋಟೋ ಸೆರೆ ಹಿಡಿದು ಅಸಭ್ಯವಾಗಿ ವರ್ತಿಸುತ್ತಿದ್ದ ಬಟ್ಟೆ ಮಳಿಗೆ ಮಾಲೀಕನಿಗೆ ಸಾರ್ವಜನಿಕರು ಹಾಗೂ ಸಂಘಟನೆಯೊಂದರ ಸದಸ್ಯರು ಹಿಡಿದು ಥಳಿಸಿರುವ ಘಟನೆ ಮಾಗಡಿ ರಸ್ತೆ ತಾವರೆಕೆರೆಯಲ್ಲಿ ನಡೆದಿದೆ.

ಅಂಜನಪುರ ನಿವಾಸಿ ದೆಹಲಿ ಮೂಲದ ಬಟ್ಟೆ ವ್ಯಾಪಾರಿ ಪ್ರಕಾಶ ಹಲ್ಲೆಗೊಳಗಾದವ. ಈತನನ್ನು ತಾವರೆಕೆರೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಕೆಲ ವರ್ಷಗಳಿಂದ ಮಹಿಳೆಯೊಬ್ಬರು ಈತನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾಲೀಕ ಪ್ರಕಾಶ ಹಲವು ದಿನಗಳಿಂದ ಮಹಿಳೆಗೆ ಕಿರುಕುಳ ನೀಡುತ್ತಿದ್ದ. ಮೊಬೈಲ್‍ನಲ್ಲಿ ಫೋಟೋ ತೆಗೆದುಕೊಳ್ಳುತ್ತೇನೆ. ವಿವಿಧ ರೀತಿಯ ಬಟ್ಟೆಗಳನ್ನು ಧರಿಸು ಎಂದು ಆಕೆಗೆ ಒತ್ತಾಯಿಸುತ್ತಿದ್ದ. ಈ ದುರ್ವರ್ತನೆಯಿಂದ ಬೇಸತ್ತ ಮಹಿಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಹಲವು ಬಾರಿ ಮಾಲೀಕನಿಗೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೂ ಈತ ತನ್ನ ಚಾಳಿ ಮುಂದುವರಿಸಿದ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಮಾಲೀಕನ ವರ್ತನೆ ಮಿತಿ ಮೀರಿದ್ದರಿಂದ ಬೇಸತ್ತ ಮಹಿಳೆ ಕೊನೆಗೆ ಈ ವಿಚಾರವನ್ನು ಸ್ಥಳೀಯರ ಗಮನಕ್ಕೆ ತಂದರು. ಬಟ್ಟೆ ಅಂಗಡಿಗೆ ಬಂದ ಸ್ಥಳೀಯರು ಆತನ ಮೊಬೈಲ್ ಕಸಿದುಕೊಂಡು ವೀಕ್ಷಿಸಿದಾಗ ಮಹಿಳೆಯ ಫೋಟೊಗಳಿರುವುದು ಕಂಡುಬಂದಿದೆ. ಬಳಿಕ ಮಾಲೀಕ ಪ್ರಕಾಶನಿಗೆ ಥಳಿಸಿದ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಸ್ನೇಹಿತರು ಮತ್ತು ಸ್ಥಳಿಯರೊಂದಿಗೆ ಚರ್ಚಿಸಿದ ಬಳಿಕ ಈ ಬಗ್ಗೆ ದೂರು ದಾಖಲಿಸುವುದಾಗಿ ಮಹಿಳೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಮತ್ತೊಂದು ಪವಾಡ; 10 ದಿನಗಳ ಬಳಿಕ ಇಬ್ಬರ ಜೀವಂತ ರಕ್ಷಣೆ! ಸಾವಿನ ಸಂಖ್ಯೆ 1,344 ಕ್ಕೆ ಏರಿಕೆ

Pune Fort Murder: ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್; 3ನೇ ಆರೋಪಿ ಬಂಧನ; ಯಾರು ಈ ರಿತೇಶ್?

RCB ಹೆಸರು ಬದಲಾಗುತ್ತಾ? ವದಂತಿಗಳಿಗೆ ತೆರೆ ಎಳೆದ ಫ್ರಾಂಚೈಸಿ ಅಧ್ಯಕ್ಷ ಆರ್ಯಮನ್ ಬಿರ್ಲಾ!

ಮಳೆ, 15,500 ಅಡಿ ಎತ್ತರದಲ್ಲಿ ಸೇನಾ ಕಾರ್ಯಾಚರಣೆ; ಪಾಕ್‌ ಉಗ್ರನ ಬೇಟೆ, 3 ಪ್ರಮುಖ ದಾಳಿಗಳಲ್ಲಿ ಶಾಮೀಲಾಗಿದ್ದ Yasir ಹತ

SIR ಹೆಸರಿನಲ್ಲಿ ಮುಸ್ಲಿಮರನ್ನು ಬಾಂಗ್ಲಾದೇಶ ನುಸುಳುಕೋರರೆಂದು ಬಿಂಬಿಸಬೇಡಿ: ಮಾಜಿ ಮುಖ್ಯ ಚುನಾವಣಾ ಆಯುಕ್ತ SY Quraishi