ಸರ್ಕಸ್ ಆನೆಗಳ ಮಾಹಿತಿ ನೀಡಲು ಸೂಚನೆ
ಸರ್ಕಸ್‍ನಲ್ಲಿ ಬಳಸುವುದಕ್ಕಾಗಿ ಆನೆಗಳನ್ನು ನಿರ್ಮಾಣ ಕಟ್ಟಡದ ಮುಂದೆ ಕಟ್ಟಿಹಾಕಿದ್ದ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಹೈಕೋರ್ಟ್ ಸರ್ಕಾರದ ಪರ ವಕೀಲರಿಗೆ ಸೋಮವಾರ ಮೌಖಿಕವಾಗಿ ಸೂಚನೆ ನೀಡಿದೆ...
ಬೆಂಗಳೂರು: ಸರ್ಕಸ್‍ನಲ್ಲಿ ಬಳಸುವುದಕ್ಕಾಗಿ ಆನೆಗಳನ್ನು ನಿರ್ಮಾಣ ಕಟ್ಟಡದ ಮುಂದೆ ಕಟ್ಟಿಹಾಕಿದ್ದ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಹೈಕೋರ್ಟ್ ಸರ್ಕಾರದ ಪರ ವಕೀಲರಿಗೆ ಸೋಮವಾರ ಮೌಖಿಕವಾಗಿ ಸೂಚನೆ ನೀಡಿದೆ.
ಸರ್ಕಸ್ ಹಾಗೂ ದೇವಾಲಯಗಳಲ್ಲಿ ಆನೆಗಳನ್ನು ಬಳಸುವುದಕ್ಕಾಗಿ ಮಾರ್ಗಸೂಚಿಗಳನ್ನು ರಚಿಸುವಂತೆ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಕೋರಿ ಕಂಪ್ಯಾಷನ್ ಅನ್‍ಲಿಮಿಟೆಡ್ ಪ್ಲಸ್ ಆ್ಯಕ್ಷನ್ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ ಮತ್ತು ನ್ಯಾ.ಬಿ.ವಿ.ರತ್ನಕಲಾ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ಆದೇಶ ನೀಡಿದೆ.
ಸರ್ಕಸ್ ಬಳಕೆಗಾಗಿ ಆನೆಗಳನ್ನು ಕಟ್ಟಿಹಾಕಿರುವ ಸಂಬಂಧ ಪತ್ರಿಕೆಗಳಲ್ಲಿ ವರದಿಯಾಗಿದ್ದ ಬಗ್ಗೆ ಪ್ರಸ್ತಾಪಿಸಿದ ನ್ಯಾ.ಬಿ.ವಿ.ನಾಗರತ್ನ ಅವರು, ಯಾವ ಕಾರಣಕ್ಕಾಗಿ ಆನೆಗಳನ್ನು ಬಳಸಲಾಗುತ್ತಿದೆ. ಅನುಮತಿ ಪಡೆದು ಆನೆಗಳನ್ನು ಬಳಸಲಾಗುತ್ತಿದೆಯೇ ಎಂಬುದನ್ನು ಮುಂದಿನ ವಿಚಾರಣೆ ವೇಳೆ ತಿಳಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.