ಬೆಂಗಳೂರು : ಸಾಲಬಾಧೆ ಮತ್ತೆ ನಾಲ್ವರು ರೈತರನ್ನು ಬಲಿ ಪಡೆದುಕೊಂಡಿದೆ. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಅಪ್ಪಾಸಾಬ ದುಂಡಪ್ಪಾ ಮಾನೆ (೫೧), ರಾಮದುರ್ಗ ತಾ. ದಾಡಿಭಾಂವಿ ಗ್ರಾಮದ ಬಸಪ್ಪ ರಾಜಪ್ಪ ಕಿಟದಾಳ (೪೫), ಚಿಕ್ಕಬಳ್ಳಾಪುರ ತಾ. ಕಸಬಾ ಹೋಬಳಿಯ ಕರಿಗಾನಪಾಳ್ಯದ ರೈತ ಚಂದ್ರಶೇಖರ್ (೩೨) ಅಫ್ಜಲ್ ಪುರ ತಾಲೂಕಿನ ಕೆಕ್ಕರಸಾವಳಗಿ ಗ್ರಾಮದ ಸೈದಪ್ಪ ಮಲಕಪ್ಪ ಕುಂಬಾರ(೫೩) ಮೃತ ರೈತರು. ಅಂಕಲಿಯ ಅಪ್ಪಾಸಾಬ ದುಂಡಪ್ಪಾ ಮಾನೆ ಸಿದ್ದಾಪುರವಾಡಿ ಗ್ರಾಮದಲ್ಲಿರುವ ತಮ್ಮ ಜಮೀನಿನಲ್ಲೇ ನೇಣಿಗೆ ಶರಣಾಗಿದ್ದಾರೆ.
ದಾಡಿಭಾಂವಿಯ ಬಸಪ್ಪ ರಾಜಪ್ಪ ಕಿಟದಾಳ(೪೫) ಟ್ರ್ಯಾಕ್ಟರ್ ಖರೀದಿಸಲೆಂದು ರು.೧೬ ಲಕ್ಷ ಸಾಲ ಮಾಡಿದ್ದರು. ಕರಿಗಾನ ಪಾಳ್ಯದ ಚಂದ್ರ ಶೇಖರ್ ಕೃಷಿಗಾಗಿ ಹಲವು ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದರು. ಸಾಲ ಮರು ಪಾವತಿಸದ ಹಿನ್ನೆಲೆಯಲ್ಲಿ ಸುಸ್ಥಿದಾರರಾಗಿ ನೋಟೀಸು ಪಡೆದಿದ್ದರು. ಕೆಕ್ಕರಸಾವಳಗಿ ಸೈದಪ್ಪ ಮಲಕಪ್ಪ ಕುಂಬಾರ ಕೊಳವೆ ಬಾವಿ ಕೊರೆ ಯಲು ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಸಾಲ ಮಾಡಿಕೊಂಡಿದ್ದರು.