(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಬಿಜೆಪಿಯಲ್ಲೀಗ ಸ್ಥಳೀಯ ನಾಯಕತ್ವದ ಗುಸುಗುಸು

ರಾಷ್ಟ್ರಾದ್ಯಂತ `ಸದ್ದು' ಮಾಡಿ ಒನ್ ಮಾ್ಯನ್ ಶೋನಂತೆ ರಾರಾಜಿಸಿದ್ದ ಪ್ರಧಾನಿ ನರೇಂದ್ರ ಮೋದಿಯ ಜಪ ಈಗ ನಡೆಯುವುದಿಲ್ಲವೇ? ದಕ್ಷಿಣದಲ್ಲಿ ಬಿಜೆಪಿಗೆ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಮೋದಿ ಮೋಡಿ ನಡೆಯಲಿದೆಯೇ?...

ಬೆಂಗಳೂರು: ರಾಷ್ಟ್ರಾದ್ಯಂತ `ಸದ್ದು' ಮಾಡಿ ಒನ್ ಮಾ್ಯನ್ ಶೋನಂತೆ ರಾರಾಜಿಸಿದ್ದ ಪ್ರಧಾನಿ ನರೇಂದ್ರ ಮೋದಿಯ ಜಪ ಈಗ ನಡೆಯುವುದಿಲ್ಲವೇ? ದಕ್ಷಿಣದಲ್ಲಿ ಬಿಜೆಪಿಗೆ ಹೆಬ್ಬಾಗಿಲಾಗಿರುವ ಕರ್ನಾಟಕದಲ್ಲಿ ಮೋದಿ ಮೋಡಿ ನಡೆಯಲಿದೆಯೇ? ಇಲ್ಲವೇ ಸ್ಥಳೀಯ ನಾಯಕತ್ವಕ್ಕೆ ಮರಳಬೇಕೆ? ಜೆಡಿಯು- ಆರ್‍ಜೆಡಿ ಒಂದಾದ ಹಿನ್ನೆಲೆಯ ರಾಜ್ಯದಲ್ಲಿರುವ ಜನತಾ ಪರಿವಾರದ ನಾಯಕರು ಒಗ್ಗೂಡುವರೆ? ಈ ಪ್ರಶ್ನೆಗಳು ಇದೀಗ ಮೇಲೆದ್ದಿವೆ.

ಬಿಹಾರದಲ್ಲಿ ಮಹಾಮೈತ್ರಿ ಕೂಟಕ್ಕೆ ಭರ್ಜರಿ ಗೆಲುವು ಸಿಕ್ಕಿರುವುದರಿಂದ ದೇಶದ ರಾಜಕಾರಣದಲ್ಲಿ ತಳಮಳ ಆರಂಭವಾಗಿದೆ. ಏಕ ವ್ಯಕ್ತಿ- ಏಕ ಪಕ್ಷ ಎಂಬ ಉಕ್ತಿಗೆ ಅಂಟಿಕೊಂಡು ಆಯಾ ಪ್ರಾದೇಶಿಕ ಪಕ್ಷಗಳನ್ನು ಮರೆತಿದ್ದರೆ ಎಂಬ ಅನುಮಾನವನ್ನು ಬಿಹಾರದ ಜನತೆ ಸುಳ್ಳು ಮಾಡಿದ್ದಾರೆ. ಇತರೆ ರಾಜ್ಯಗಳ ಮೇಲೂ ಇದರ ಛಾಯೆ ಬೀರಿರುವುದು ಅಕ್ಷರಶಃ ಸತ್ಯ.ಕರ್ನಾಟಕದಲ್ಲಿ ಇಷ್ಟು ದಿನ ಮೋದಿ ಜಪ ಮಾಡುತ್ತಿದ್ದ ಬಿಜೆಪಿ ನಾಯಕರು ಇನ್ನು ಮೇಲೆ ಮತ ಸೆಳೆಯುವ ಸ್ಥಳೀಯ ನಾಯಕನಿಗೆ ಮನ್ನಣೆ ನೀಡಲು ಸಕಾಲವಾಗಬಹುದು.

ಬಿಹಾರದಲ್ಲಿ ಮತ ಸೆಳೆಯುವ ನಾಯಕರಿದ್ದರೂ ಸಹ ಅಲ್ಲಿ ಜಾತಿ ಪ್ರಮುಖ ಟ್ರಂಪ್ ಕಾರ್ಡ್ ಆಗಿತ್ತು. ಹಾಗೆಯೇ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ನೇಮಿಸಿದಲ್ಲಿ 2018ರ
ಚುನಾವಣೆಯಲ್ಲಿ ಅಧಿಕಾರ ಹಿಡಿಯಬಹುದು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದ ನಾಯಕರನ್ನು ನಿಯೋಜಿಸಿ ಮುಂದಿನ
ಚುನಾವಣೆ ಎದುರಿಸಿದರೆ ಜಯ ಸಿಗಬಹುದೇ?ಎನ್ನುವ ಜತೆಗೆ ಈಗ ಸ್ಥಳೀಯ ನಾಯಕತ್ವದ ವಿಚಾರದ ಪ್ರಸ್ತಾಪವಿಡುವ ಸುದ್ದಿಗಳು ಹರಿದಾಡುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!