ಬೆಂಗಳೂರು: ನಗರದ ಹನುಮಂತನಗರದ ದೇವಾಲಯವೊಂದರಲ್ಲಿ ಅಪ್ರಾಪ್ತೆಯ ವಿವಾಹ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ, ಕಾರ್ಯಚರಣೆ ನಡೆಸಿದ ಮಕ್ಕಳ ಕಲ್ಯಾಣ ಸಮಿತಿ, ಪೊಲೀಸರು ಮತ್ತು ಸ್ಥಳೀಯ ನಾಗರಿಕರು17ವರ್ಷದ ಬಾಲಕಿಯನ್ನು ರಕ್ಷಿಸಿದ್ದಾರೆ.
ಹನುಮಂತನಗರದ ಮನೆಯೊಂದರ ಮೇಲೆ ಅಪ್ರಾಪ್ತೆಗೆ ಮದುವೆ ಮಾಡಲಾಗುತ್ತಿದೆ ಎಂಬ ಮಾಹಿತಿ ಹನುಮಂತ ನಗರ ಪೊಲೀಸರಿಗೆ ಬಂದಿತ್ತು. ಪೊಲೀಸರು ಈ ವಿಚಾರವನ್ನು
ಕೂಡಲೇ ಮಕ್ಕಳ ಕಲ್ಯಾಣ ಸಮಿತಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಚರಣೆ ನಡೆಸಿದಿ ಪೊಲೀಸರು, ಮಕ್ಕಳ ಕಲ್ಯಾಣ ಸಮಿತಿ, ಸರ್ಕಾರೇತರ ಸಂಸ್ಥೆ `ಬಾಸ್ಕೊ ಮನೆ'ಗೆ ಸಿಬ್ಬಂದಿ
ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ, ಹನುಮಂತನಗರದ ಬಾಲಕಿಗೂ, ರಾಜಾಜಿನಗರದ 23 ವರ್ಷದ ಮದುವೆ ಮಾಡಲಾಗುತ್ತಿತ್ತು.
ಬಾಲಕಿಯ ವಯಸ್ಸಿನ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿತ್ತು, ಆಕೆ ಇನ್ನು ಅಪ್ರಾಪ್ತೆ ಎಂಬುದು ಖಚಿತವಾಗಿದೆ. ಕೂಡಲೇ ಆಕೆಯನ್ನು ರಕ್ಷಿಸಿದ ಸಿಬ್ಬಂದಿ ಮಕ್ಕಳ ಸಮಿತಿಗೆ ಒಪ್ಪಿಸಿದ್ದಾರೆ.
ಬಳಿಕ ಸಮಿತಿ ಸಿಬ್ಬಂದಿ ಆಕೆಯ ಪಾಲಕರಿಗೆ ಆಪ್ತ ಸಮಾಲೋಚನೆ ಮಾಡಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬರಿಂದ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಎನ್ ಜಿಓ ನೆರವಿನೊಂದಿಗೆ ಬಾಲಕಿ ವಿವಾಹ ತಡೆಯಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿಳಿದೂ ತಿಳಿದು ತಪ್ಪು ಮಗಳಿಗೆ 17 ವರ್ಷವಾಗಿದ್ದು ಮದುವೆ ಮಾಡುವುದು ಕಾನೂನು ಬಾಹಿರ ಎಂಬುದು ಪೋಷಕರಿಗೂ ತಿಳಿದಿತ್ತು. ಆದರೂ, ಯಾರಿಗೂ ಗೊತ್ತಾಗದಂತೆ ದೇವಸ್ಥಾನದಲ್ಲಿ ಮದುವೆ ಮಾಡಲು ನಿರ್ಧರಿಸಿದ್ದರು ಎಂದು ಹನುಮಂತ ನಗರ ಪೊಲೀಸರು ತಿಳಿಸಿದ್ದಾರೆ.