ದೇವನಹಳ್ಳಿ: ವಿಜಯಪುರದ ದೇವನಹಳ್ಳಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಮತ್ತು ಕಾರು ನಡುವೆ ಭಾನುವಾರ ಸಂಜೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ದಂಪತಿ ಮೃತಪಟ್ಟಿದ್ದಾರೆ. ಆದರೆ,
ಕಾರಿನಲ್ಲಿದ್ದ ಮಗು ಅಚ್ಚರಿ ಎಂಬಂತೆ ಪ್ರಾಣಾಪಾಯದಿಂದ ಪಾರಾಗಿದೆ.
ಶಿಡ್ಲಘಟ್ಟ ತಾಲೂಕಿನ ಮಳ್ಳೂರು ಗ್ರಾಪಂ ಮಾಜಿ ಅಧ್ಯಕ್ಷ ಎಂ. ನಾಗರಾಜ್ (55) ಹಾಗೂ ಅವರ ಪತ್ನಿ ಪಾರ್ವತಿ (42) ಮೃತರು. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ. ದಂಪತಿ ದೇವನಹಳ್ಳಿ ತಾಲೂಕು ಚನ್ನಹಳ್ಳಿಯ ನೆಂಟರ ಮನೆಯಿಂದ ಶಿಡ್ಲಘಟ್ಟಕ್ಕೆ ತೆರಳುತ್ತಿದ್ದರು.