(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಗರುಡಾಚಾರ್ ಪಾಳ್ಯ ರಸ್ತೆ ದುರವಸ್ಥೆ

ಗರುಡಾಚಾರ್ ಪಾಳ್ಯದಿಂದ ಮಾರತ್‍ಹಳ್ಳಿ ಮತ್ತು ಕುಂದಲಹಳ್ಳಿ ಕಡೆ ತೆರಳುವ ಮುಖ್ಯ ರಸ್ತೆಯ ಹದಗೆಟ್ಟ ಸ್ಥಿತಿ ಸ್ಥಳೀಯ ಜನರಿಗೆ ಸಂಕಷ್ಟ ತಂದೊಡ್ಡಿದೆ...

ಕೆ.ಆರ್.ಪುರ: ಗರುಡಾಚಾರ್ ಪಾಳ್ಯದಿಂದ ಮಾರತ್‍ಹಳ್ಳಿ ಮತ್ತು ಕುಂದಲಹಳ್ಳಿ ಕಡೆ ತೆರಳುವ ಮುಖ್ಯ ರಸ್ತೆಯ ಹದಗೆಟ್ಟ ಸ್ಥಿತಿ ಸ್ಥಳೀಯ ಜನರಿಗೆ ಸಂಕಷ್ಟ ತಂದೊಡ್ಡಿದೆ.

ಇಲ್ಲಿನ ಪಾಲಿಕೆ ಸದಸ್ಯ ನಿತಿನ್ ಪುರುಷೋತ್ತಮ್ ಅವರ ಮನೆಯ ಮುಂದೆ ಹಾದುಹೋಗುವ ರಸ್ತೆ ಇದಾಗಿದ್ದು, ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಮಳೆ ಬಂದಾಗ ಕೆಸರು ತುಂಬಿ
ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇದರಿಂದ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗಿದೆ. ರಸ್ತೆಯ ಬಳಿ ಸರ್ಕಾರಿ ಶಾಲೆಯಿದ್ದು, ನಿತ್ಯ ಮಕ್ಕಳು ಇದೇ ದಾರಿಯಲ್ಲಿ ಬರಬೇಕಾಗಿದೆ.

ಹರಿದುಬರುವ ಕೆಸರು ಶಾಲೆ ಮುಂದೆ ನಿಲ್ಲುವುದರಿಂದ ಶಿಕ್ಷಕರ ಪಾಠಪ್ರವಚನಗಳಿಗೂ ತೊಂದರೆಯಾಗಿದೆ. ಸ್ಥಳೀಯ ಬ್ರಿಗೇಡ್ ಅಪಾರ್ಟ್‍ಮೆಂಟ್ ಸೇರಿದಂತೆ ಕೆಲವು ಖಾಸಗಿ ಬಹುಮಹಡಿ ಕಟ್ಟಡಗಳು ಅವೈಜ್ಞಾನಿಕವಾಗಿ ಒಳಚರಂಡಿ ಸಂಪರ್ಕ ಕಲ್ಪಿಸಿಕೊಂಡಿವೆ. ಹೀಗಾಗಿ ಪ್ರತಿ ಬಾರಿ ಮಳೆಯಾದಾಗ ಸಮಸ್ಯೆಯಾಗುತ್ತದೆ ಎಂಬುದು ಸ್ಥಳೀಯರ ಆರೋಪ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ'; ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ