(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಕಬ್ಬನ್ ಪಾರ್ಕ್‍ನಲ್ಲಿ ದೀಪಾವಳಿ ಜಾಗೃತಿ

ಕಬ್ಬನ್ ಪಾರ್ಕ್‍ನಲ್ಲಿ ಭಾನುವಾರ ವಾಹನ ನಿಷೇಧ ಹಿನ್ನೆಲೆಯಲ್ಲಿ ಕೆಲವು ಗಂಟೆ ಕಾಲ ದೀಪಾವಳಿ ಆಚರಣೆ ಬಗ್ಗೆಯ ಮಾಹಿತಿ ಕಾರ್ಯಾಗಾರವಾಗಿ ಮಾರ್ಪಟ್ಟಿತ್ತು. ನಟಿ ತಾರಾ ಅನುರಾಧ ಅವರು ಹಬ್ಬದಲ್ಲಿ ಅನುಸರಿಸಬೇಕಾದ ಜಾಗೃತಿ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು...

ಬೆಂಗಳೂರು: ಕಬ್ಬನ್ ಪಾರ್ಕ್‍ನಲ್ಲಿ ಭಾನುವಾರ ವಾಹನ ನಿಷೇಧ ಹಿನ್ನೆಲೆಯಲ್ಲಿ ಕೆಲವು ಗಂಟೆ ಕಾಲ ದೀಪಾವಳಿ ಆಚರಣೆ ಬಗ್ಗೆಯ ಮಾಹಿತಿ ಕಾರ್ಯಾಗಾರವಾಗಿ ಮಾರ್ಪಟ್ಟಿತ್ತು. ನಟಿ ತಾರಾ ಅನುರಾಧ ಅವರು ಹಬ್ಬದಲ್ಲಿ ಅನುಸರಿಸಬೇಕಾದ ಜಾಗೃತಿ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.

ಆಚರಣೆ ಹೇಗೆ, ಪಟಾಕಿಯಿಂದ ಮಕ್ಕಳನ್ನು ಏಕೆ ದೂರವಿಡಬೇಕು, ಆದಷ್ಟು ಪರಿಸರಸ್ನೇಹಿಯಾಗಿ ಬೆಳಕಿನ ಹಬ್ಬವನ್ನು ಯಾವ ರೀತಿ ಮಾಡಬಹುದು ಎಂಬಿತ್ಯಾದಿಗಳ ಕುರಿತು ಮಾಹಿತಿಗಳನ್ನು ನೀಡಿದರು. ಕನ್ನಡ ಕ್ರಿಯಾ ಸಮಿತಿಯಿಂದ ಸಾಹಿತ್ಯ ಸೌರಭ ಎಂಬ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಸರಿ ಉತ್ತರ ಹೇಳಿದವರಿಗೆ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ನಡೆದ ಉದಯ ರಾಗ ಎಂಬ ಕಾರ್ಯಕ್ರಮದಲ್ಲಿ ಪ್ರವೀಣ್ ಕುಮಾರ್ ತಂಡವು ಜನಪದಗೀತೆಗಳ ಗಾಯನ ಪ್ರಸ್ತುತಪಡಿಸಿತು.

ಯೂನಿವರ್ಸ್ ಆಟ್ರ್ಸ್ ಫೌಂಡೇಷನ್ ಸಹಯೋಗದಲ್ಲಿ ಬೆಳಗ್ಗೆ 7ರಿಂದ ಪದ್ಮಾಲಯ ಡ್ಯಾನ್ಸ್ ಫೌಂಡೇಶನ್‍ನಿಂದ ಹಾಗೂ ಶಿವಪ್ರಿಯ ಸ್ಕೂಲ್ ಆಫ್ ಡ್ಯಾನ್ಸ್‍ನಿಂದ ನೃತ್ಯ ಪ್ರದರ್ಶನ ನಡೆಯಿತು. ಚಂದ್ರಿಕ ಮಹಾಪತ್ತರ್ ಹಾಗೂ ಅಂಕಿತ ಸಾಹೋ ಅವರಿಂದ ಒಡಿಸ್ಸಿ ನೃತ್ಯವೂ ಎಲ್ಲರ ಗಮನ ಸೆಳೆದವು. ಮುಂದಿನ ಭಾನುವಾರ ಮಾತ್ರವಲ್ಲದೆ ತಿಂಗಳ ಎರಡನೇ
ಶನಿವಾರವಾದ ಕಾರಣ ಅಂದು ಕೂಡ ಕಬ್ಬನ್ ಉದ್ಯಾನದಲ್ಲಿ ವಾಹನ ನಿಷೇಧವನ್ನು ಪ್ರಾಯೋಗಿಕವಾಗಿ ಮಾಡಲಾಗುತ್ತಿದೆ. ಇನ್ನು ಮುಂದೆ ತಿಂಗಳ ಎರಡನೇ ಶನಿವಾರ ಹಾಗೂ ವರ್ಷದ 3 ಸರ್ಕಾರಿ ರಜೆಗಳಲ್ಲಿ ವಾಹನ ನಿಷೇಧಿಸಲಾಗುತ್ತಿದ್ದು, ಈ ದಿನಗಳಲ್ಲಿ ಪಾರ್ಕಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅವಕಾಶ ನೀಡಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚುನಾವಣಾ ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!