ನಾಗಮಣಿ ಪ್ರಕರಣ 6 ಮಹಿಳೆಯರ ಸೆರೆ
ನಾಗಮಣಿ, ವಜ್ರ ನೀಡುವುದಾಗಿ ವಂಚಿಸುತ್ತಿದ್ದವರ ಪತ್ತೆಗೆ ಮುಂದಾಗಿದ್ದ ಡಿಎಸ್ಪಿ ಸೇರಿದಂತೆ ನಾಲ್ವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ 6 ಮಂದಿ ಮಹಿಳೆಯರನ್ನು ಮಂಗಳವಾರ ಬಂಧಿಸಲಾಗಿದೆ...
ದಾವಣಗೆರೆ: ನಾಗಮಣಿ, ವಜ್ರ ನೀಡುವುದಾಗಿ ವಂಚಿಸುತ್ತಿದ್ದವರ ಪತ್ತೆಗೆ ಮುಂದಾಗಿದ್ದ ಡಿಎಸ್ಪಿ ಸೇರಿದಂತೆ ನಾಲ್ವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ 6 ಮಂದಿ ಮಹಿಳೆಯರನ್ನು ಮಂಗಳವಾರ ಬಂಧಿಸಲಾಗಿದೆ.
ಮಧ್ಯಪ್ರದೇಶ ಮೂಲದ ಅಲೆಮಾರಿ ಜನಾಂಗಕ್ಕೆ ಸೇರಿದ ವಂಚಕರ ಜಾಲದಿಂದಲೇ ಪೂರ್ವ ವಲಯದ ಐಜಿಪಿ ಕಚೇರಿ ವಿಶೇಷ ತಂಡದ ಡಿಎಸ್ಪಿ ಮಂಜುನಾಥ ಹಾಗೂ ಸಿಬ್ಬಂದಿ ಮೇಲೆ ದಾಳಿ ನಡೆಸಲಾಗಿತ್ತು. ಈ ವಂಚನೆ ಜಾಲಕ್ಕೆ ಮಹಿಳೆಯರೂ ಸಾಥ್ ನೀಡಿರುವ ಆಘಾತಕಾರಿ ಅಂಶ ಹೊರ ಬಿದ್ದಿದೆ. ಪೊಲೀಸರು ಮಫ್ತಿಯಲ್ಲಿದ್ದಾಗ ಹಲ್ಲೆ ನಡೆಸಲಾಗಿತ್ತು.
ಇದರಿಂದ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. ಬಂಧಿತರು ವಂಚಕರ ಪತ್ನಿ ಅಥವಾ ಕುಟುಂಬ ಸದಸ್ಯರು ಎನ್ನಲಾಗಿದ್ದು ವಿಚಾರಣೆ ಕೈಗೊಳ್ಳಲಾಗಿದೆ. ಮಧ್ಯಪ್ರದೇಶದ ಈ ಅಲೆಮಾರಿ ಜನಾಂಗವೃತ್ತಿಪರ ವಂಚಕರಾಗಿರುವ ಸಾಧ್ಯತೆ ಇದೆ. ನಾಗಮಣಿ ಹಾಗೂ ವಜ್ರ ಕಡಿಮೆ ಬೆಲೆಗೆ ಖರೀದಿಸುವ ಆಸೆಯಿಂದ ಹಣ ತಂದವರ ಮೇಲೆ ತಂಡದ ಪುರುಷರು ದಾಳಿ
ನಡೆಸಿ ಹಣ ಲಪಟಾಯಿಸುತ್ತಾರೆ ಎಂದು ತಿಳಿದುಬಂದಿದೆ.