ಜೈಪುರ: ಹಸುವಿನ ಪ್ರತಿಕೃತಿ ತಯಾರಿಸಿ ಅದನ್ನು ಗಾಳಿಯಲ್ಲಿ ನೇತು ಹಾಕಿರುವ ಘಟನೆಯೊಂದು ವಿವಾದಕ್ಕೆ ಕಾರಣವಾಗಿದೆ.
ಹಸುಗಳನ್ನು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ದೂರ ಇಡಿ ಎಂಬ ಸಂದೇಶ ಸಾರಲು ಮಾಡಿದ್ದ ಈ ಪ್ರಯತ್ನ ಪ್ರತಿಭಟನ ಕಾರರಿಗೆ ಗೊತ್ತಿಲ್ಲವಾದ್ದರಿಂದ ಪ್ರತಿಭಟನೆ ನಡೆದು, ಪೊಲೀಸರಿಗೆ ದೂರು ಹೋಗಿ ಅದನ್ನು ಕೆಳಗಿಳಿಸುವಂತಾಯ್ತು. ಜವಾಹರ ಕಲಾ ಕೇಂದ್ರ ನಡೆಸಿದ್ದ ಈ ಸಾಂಕೇತಿಕ ಪ್ರಯತ್ನ ವಿವಾದವಾಗಿ, ಬಳಿಕ ಬಗೆಹರಿಯಿತು.