ಡಿ.ವಿ. ಸದಾನಂದಗೌಡ 
ಜಿಲ್ಲಾ ಸುದ್ದಿ

ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಲಿ: ಸದಾನಂದ ಗೌಡ

ಸಾಮಾಜಿಕ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿಸಿ, ಸಾವಿರಾರು ರೈತರಿಗೆ ಆತ್ಮಸ್ಥೈರ್ಯ ತುಂಬುವಂತಹ ಕೆಲಸವಾಗಬೇಕಿದೆ ಎಂದು ಕೇಂದ್ರ ...

ಬೆಂಗಳೂರು: ಸಾಮಾಜಿಕ ವ್ಯವಸ್ಥೆಯನ್ನು ಅರ್ಥಪೂರ್ಣವಾಗಿಸಿ, ಸಾವಿರಾರು  ರೈತರಿಗೆ ಆತ್ಮಸ್ಥೈರ್ಯ ತುಂಬುವಂತಹ ಕೆಲಸವಾಗಬೇಕಿದೆ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ.

ನಗರದ ಬಿಜಿಎಸ್ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ನಡೆದ ಬಿಜಿಎಸ್ ಸಂಸ್ಥಾಪನ ದಿನಾಚರಣೆ- ಬಿಜಿಎಸ್ ಉತ್ಸವ್ ಸಮಾರಂಭದಲ್ಲಿ ಮಾತನಾಡಿದರು. ಒಕ್ಕಲಿಗ ಸಮುದಾಯ ಸೇರಿದಂತೆ ಎಲ್ಲ ರೈತರಿಗೆ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಚಾಕಚಕ್ಯತೆ ಇತ್ತು. ಆದರೆ ಆತ್ಮ ಸ್ಥೈರ್ಯದ ಕೊರತೆಯಿತ್ತು. ಡಾ.ಬಾಲಗಂಗಾಧರನಾಥ ಸ್ವಾಮೀಜಿ ಇಡೀ ಸಮುದಾಯವನ್ನು ವಿದ್ಯಾಕ್ಷೇತ್ರ, ಕೃಷಿ ಕ್ಷೇತ್ರದೆಡೆಗೆ ಕರೆದೊಯ್ದರು ಎಂದರು.

ಯುವಕರಲ್ಲಿ ಒಳ್ಳೆಯ ವ್ಯಕ್ತಿತ್ವದ ಜತೆಗೆ ಜವಾಬ್ದಾರಿ, ಬದಟಛಿತೆ ನಿರ್ಮಾಣವಾದಾಗ ಮಾತ್ರ ಸರ್ಕಾರದ ಡಿಜಿಟಲ್ ಇಂಡಿಯಾದಂತಹ ಯೋಜನೆಗಳು ನೆರವೇರಲು ಸಾಧ್ಯ. ಬಾಲಗಂಗಾಧರನಾಥ ಸ್ವಾಮೀಜಿಯವರು ಯುವಕರಲ್ಲಿ ಬದ್ಧತೆ, ಆತ್ಮಸ್ಥೈರ್ಯವನ್ನು ತುಂಬಿ, ಸಾಮಾಜಿಕ ಪರಿವರ್ತನೆ ಕಂಡವರು. ಹಣತೆ ಬೆಳಕಿನಲ್ಲಿ ಒಬ್ಬರ ಮುಖ ಮತ್ತೊಬ್ಬರಿಗೆ ಕಾಣುವುದಷ್ಟೇ ಅಲ್ಲದೆ ತಮ್ಮಲ್ಲಿರುವ ಒಳ್ಳೆಯ ಆಲೋಚನೆಗಳನ್ನು ಇನ್ನೊಬ್ಬರಲ್ಲಿ ಹಂಚಿಕೊಳ್ಳಲು ಹಾಗೂ ಬೇರೆಯವರಿಂದ ಉತ್ತಮ ವಿಷಯಗಳನ್ನು ಪಡೆಯಲು ಸಹಾಯಕವಾಗುತ್ತದೆ. ಬೇರೆಯವರ ಬಾಳಿನಲ್ಲಿರುವ ಅಂಧಕಾರ ತೊಡೆದುಹಾಕುವ ಸಂದರ್ಭಗಳು ಬಂದೊದಗುತ್ತದೆ ಎಂದು ಹೇಳಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕರ್ಮ ಹಾಗೂ  ಜ್ಞಾನಮಾರ್ಗವನ್ನು ಅಳವಡಿಸಿಕೊಂಡು ಭಕ್ತಿ ಮಾರ್ಗದಲ್ಲಿ ಸಂಚರಿಸಿದಾಗ ಮಾತ್ರ ಆತ ಉತ್ತಮ ಎಂದೆನಿಸಿಕೊಳ್ಳುತ್ತಾನೆ. ಅನಕ್ಷರತೆಯಷ್ಟೇ ಸಾಮಾಜಿಕ ಪಿಡುಗಲ್ಲ. ವಿದ್ಯೆಯಿದ್ದು ಕೂಡ ದುಷ್ಟರ ಒಡನಾಟ ಮಾಡಿ ಜೀವನ ಹಾಳುಮಾಡಿಕೊಳ್ಳುತ್ತಾರೆ ಅಂಥವರು ಕೂಡ ಸಮಾಜಕ್ಕೆ ಒಂದು ಪಿಡುಗು ಎಂದರು. ಬಿಜಿಎಸ್‍ನ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶನಾಥ ಸ್ವಾಮೀಜಿ, ಮಾಜಿ ಸಂಸದೆ ನಟಿ ರಮ್ಯ, ಕೌನ್ಸಿಲ್ ಆಫ್  ಆರ್ಕಿಟೆಕ್ಚರ್‍ನ ಅಧ್ಯಕ್ಷಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

Minneapolis Shooter: 'Trump ಸಾವು.. ಭಾರತ ಸರ್ವನಾಶ': ಅಮೆರಿಕ ದಾಳಿಕೋರನ ಬಂದೂಕಿನ ಮೇಲೆ ಶಾಕಿಂಗ್ ಬರಹ!

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

SCROLL FOR NEXT