(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ವಕೀಲ ನೌಶಾದ್ ಕೊಲೆ

ಭಟ್ಕಳ ಮೂಲದ ಯುವ ವಕೀಲ ನೌಶಾದ್ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಇಬ್ಬರಿಗೆ 7 ವರ್ಷ ಕಠಿಣ ಶಿಕ್ಷೆ ಸೇರಿದಂತೆ ಒಟ್ಟು ಐವರಿಗೆ ಶಿಕ್ಷೆ ವಿಧಿಸಿ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ...

ಮಂಗಳೂರು: ಭಟ್ಕಳ ಮೂಲದ ಯುವ ವಕೀಲ ನೌಶಾದ್ ಕೊಲೆ ಪ್ರಕರಣದ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಇಬ್ಬರಿಗೆ 7 ವರ್ಷ ಕಠಿಣ ಶಿಕ್ಷೆ ಸೇರಿದಂತೆ ಒಟ್ಟು ಐವರಿಗೆ ಶಿಕ್ಷೆ ವಿಧಿಸಿ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಎಸ್. ಎಚ್. ಪುಷ್ಪಾಂಜಲಿ ದೇವಿ ಅವರು ಶಿಕ್ಷೆಯ ಪ್ರಮಾಣವನ್ನು ವಿಧಿಸಿ ತೀರ್ಪಿತ್ತಿದ್ದಾರೆ. ಕೃತ್ಯದಲ್ಲಿ ಪ್ರಮುಖ ಅಪರಾಧಿಗಳಾದ ಬೆಳ್ತಂಗಡಿ ನಾಯತರ್ಪುವಿನ ದಿನೇಶ್ ಶೆಟ್ಟಿ (30), ಮಂಗಳೂರು ಕಾವೂರಿನ ಪ್ರತಾಪ್ ಶೆಟ್ಟಿ (32)ಮತ್ತು ಕೋಡಿಕಲ್‍ನ ರಿತೇಶ್ ಯಾನೆ ರೀತು (26) ಈ ಮೂವರಿಗೆ ಕೊಲೆ ಕೃತ್ಯ, ಕೊಲೆ
ಸಂಚು ಮತ್ತು ಶಸ್ತ್ರಾಸ್ತ್ರ ಬಳಕೆಯ ಕಾಯ್ದೆಯನ್ವಯ ಕಠಿಣ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ.

ಕೊಲೆಕೃತ್ಯಕ್ಕಾಗಿ ಈ ಮೂವರಿಗೆ ಜೀವಾವಧಿ ಶಿಕ್ಷೆ ಜೊತೆಗೆ ತಲಾ ರು.10 ಸಾವಿರ ದಂಡ, ಕೊಲೆಸಂಚು ರೂಪಿಸಿದ್ದಕ್ಕಾಗಿ ತಲಾ ರು.10 ಸಾವಿರ ದಂಡ ಹಾಗೂ ಅಕ್ರಮ ಶಸ್ತ್ರಾಸ್ತ್ರ ಬಳಕೆ ಪ್ರಕರಣ ಸಂಬಂಧವಾಗಿ ತಲಾ ರು.5 ಸಾವಿರ ದಂಡ ವಿಧಿಸಲಾಗಿದೆ. ಆಪರಾಧಿಗಳು ದಂಡ ತೆರಲು ತಪ್ಪಿದಲ್ಲಿ ಹೆಚ್ಚುವರಿ 5 ವರ್ಷ ಕಠಿಣ ಸಜೆ ಅನುಭವಿಸಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

ಮತ್ತಿಬ್ಬರು ಅಪರಾಧಿಗಳಾದ ಮಂಗಳೂರಿನ ಕದ್ರಿಯ ಸುಬ್ರಹ್ಮಣ್ಯ ಯಾನೆ ಸುಬ್ಬು(30) ಹಾಗೂ ಕೋಡಿಕಲ್‍ನ ಗಣೇಶ್ (31)ಅವರಿಗೆ ಕೊಲೆ ಕೃತ್ಯದಲ್ಲಿ ಸಾಕ್ಷ್ಯನಾಶ ಮಾಡಿದ್ದಕ್ಕಾಗಿ 7 ವರ್ಷಗಳ ಕಠಿಣ ಸಜೆ ಮತ್ತು ತಲಾ ರು. 10 ಸಾವಿರ ದಂಡ ಹಾಗೂ ಪೊಲೀಸರಿಗೆ ಮಾಹಿತಿ ನೀಡದ ಆಪರಾಧಕ್ಕಾಗಿ ತಲಾ ರು.5 ಸಾವಿರ ದಂಡ ವಿಧಿಸಲಾಗಿದೆ. ಈ ಆರೋಪಿಗಳು ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 3 ವರ್ಷ ಕಠಿಣ ಸಜೆ ಅನುಭವಿಸಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.

ಹನ್ನೆರಡು ಮಂದಿ ವಿರುದ್ಧ ಪ್ರಕರಣ ದಾಖಲು

ನೌಶಾದ್ ಕೊಲೆ ಪ್ರಕರಣದಲ್ಲಿ ಪೊಲೀಸರು ಒಟ್ಟು 12 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪೈಕಿ 7ಮಂದಿಯನ್ನು ಬಂಧಿಸಲಾಗಿತ್ತು. ಪ್ರಕರಣದ ವಿಚಾರಣೆ ವೇಳೆ ಇಬ್ಬರು ಆರೋಪಿಗಳಾದ ಮಂಗಳೂರಿನ ಉರ್ವದ ಶಿವಪ್ರಕಾಶ್‍ಮತ್ತು ದೆಹಲಿ ಮೂಲದ ರವಿ ಶುಕ್ವಾನಿ ಅವರನ್ನು ಖುಲಾಸೆಗೊಳಿಸಲಾಗಿತ್ತು. ಉಳಿದಂತೆ ಐವರು ಆರೋಪಿಗಳಾದ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದ ಗುಜರಾತ್ ಮೂಲದ ರಾಕೇಶ್ ಪಟೇಲ್, ದೆಹಲಿ ಮೂಲದ ಹಾಗೂ ಮಧ್ಯಪ್ರದೇಶದ ಗ್ವಾಲಿಯಾರ್‍ನಲ್ಲಿ ವಾಸವಿದ್ದ ರಾಹುಲ್, ಮಧ್ಯಪ್ರದೇಶದ ಮುಖೇಶ್, ಹಳೆಯಂಗಡಿಯ ಕಲಿ ಯೋಗೀಶ ಹಾಗೂ ಮಲ್ಪೆಯ ರವಿಪೂಜಾರಿ ವಿರುದ್ಧ ಕೇಸು ದಾಖಲಾಗಿದ್ದರೂ ಈ ಐವರು ತಲೆ ಮರೆಸಿಕೊಂಡಿದ್ದಾರೆ.

ಕೊಲೆ ಕೃತ್ಯದ ವೇಳೆ ಆರೋಪಿಗಳು ಬಳಸಿದ ಶಸ್ತ್ರಾಸ್ತ್ರ, ಪಿಸ್ತೂಲಿನಿಂದ ಹಾರಿದ ಗುಂಡು, ಸ್ಥಳದಲ್ಲಿ ಸಿಕ್ಕಿದ ಉಪಯೋಗಿಸಲ್ಪಟ್ಟ ಗುಂಡು ಹಾಗೂ ಕೊಲೆಯಾದ ನೌಶಾದ್‍ಗೆ ಬಳಕೆಯಾಗಿರುವ ಬ್ಯಾಲೆಸ್ಟಿಕ್ ವರದಿ ಮತ್ತು ಅಪರಾಧಿಗಳಲ್ಲಿ ಭಾಗಿಯಾದವರ ವಸ್ತ್ರದ ಮೇಲಿನ ರಕ್ತದ ಕಲೆಗಳು ಪ್ರಬಲ ಸಾಕ್ಷ್ಯಗಳಾಗಿ ಪರಿಗಣಿಸಲ್ಪಟ್ಟಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್