(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಹಂಪಿ-ಅಮೆರಿಕ ನಡುವೆ ಪ್ರವಾಸೋದ್ಯಮ

ದಕ್ಷಿಣ ಅಮೆರಿಕದಲ್ಲಿರುವ ಅತ್ಯಂತ ಪ್ರೇಕ್ಷಣೀಯ ಸ್ಥಳವಾದ ಮಾಚುಪಿಚು ಹಾಗೂ ಕರ್ನಾಟಕದ ಹಂಪಿಯ ಮಧ್ಯೆ ಪ್ರವಾಸೋದ್ಯಮ ಕಲ್ಪಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಪೆರುವಿನ ರಾಯಭಾರಿ ಜೋಶ್ ಜೆ.ಜಿ. ತಿಳಿಸಿದ್ದಾರೆ...

ಬೆಂಗಳೂರು: ದಕ್ಷಿಣ ಅಮೆರಿಕದಲ್ಲಿರುವ ಅತ್ಯಂತ ಪ್ರೇಕ್ಷಣೀಯ ಸ್ಥಳವಾದ ಮಾಚುಪಿಚು ಹಾಗೂ ಕರ್ನಾಟಕದ ಹಂಪಿಯ ಮಧ್ಯೆ ಪ್ರವಾಸೋದ್ಯಮ ಕಲ್ಪಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದು ಪೆರುವಿನ ರಾಯಭಾರಿ ಜೋಶ್ ಜೆ.ಜಿ. ತಿಳಿಸಿದ್ದಾರೆ.

ಕರ್ನಾಟಕದ ರೀತಿಯಲ್ಲಿ ಪೆರು ಕೂಡ ನಾಗರಿಕತೆ ತುಂಬಾ ಪ್ರಾಚೀನವಾದದ್ದು, ನಾವು ಕರ್ನಾಟಕ ಹಾಗೂ ಪೆರುವಿನ ಮಧ್ಯೆ ಸಾಂಸ್ಕೃತಿಕ ಸಂಬಂಧಗಳನ್ನು ಕಲ್ಪಿಸುವ ಜತೆಯಲ್ಲಿ ಬಂಡವಾಳ, ಗಣಿಗಾರಿಕೆಯನ್ನು ಉತ್ತಮಗೊಳಿಸಲು ಹೊರಟಿದ್ದೇವೆ. ಪೆರುವಿನಿಂದ ಕರ್ನಾಟಕ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಹಾಗೆಯೇ ಪೆರು ಇಲ್ಲಿಂದ ಜವಳಿ
ಸರಕುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು ಆದರೆ ಇನ್ನು ಉತ್ತಮ ಸಂಬಂಧ ಬೆಸೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ನಾಳೆ ಪೆರುವಿನ ರಾಷ್ಟ್ರಪತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲಿದ್ದಾರೆ ಕರ್ನಾಟಕ ಹಾಗೂ ಪೆರುವಿನ ಮಧ್ಯೆ ಸರಳ ಉದ್ಯಮ ವಹಿವಾಟು ಒಪ್ಪಂದವನ್ನು ಸದ್ಯದಲ್ಲೇ ಕೈಗೊಳ್ಳಲಿದ್ದೇವೆ. ಸೋಲಾರ್ ಶಕ್ತಿ ಹಾಗೂ ಪವನ ವಿದ್ಯುತ್‍ಗೆ ಪೆರುವಿನಲ್ಲಿ ಸಾಕಷ್ಟು ಬೇಡಿಕೆಯಿದೆ ಅದಕ್ಕೂ ಹೆಚ್ಚು ಒತ್ತು ನೀಡಲಿದ್ದೇವೆ ಎಂದರು. ಭಾರತದ ರಾಯಭಾರಿ ವಿಕ್ರಂ ವಿಶ್ವನಾಥ್ ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ