ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ನಗರದಲ್ಲೂ ಸಮ ಬೆಸ ಸಂಚಾರ?

ನಗರದ ಗ್ರಾಫಿಕ್ ಸಮಸ್ಯೆ ನಿವಾರಿಸಲು ದೆಹಲಿ ಮಾದರಿ ಸಮ-ಬೆಸ ಯೋಜನೆಯನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು...

ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಬೆಂಗಳೂರು ನಗರಾಬಿsವೃದಿಟಛಿ ಸಚಿವ ಕೆ.ಜೆ.ಜಾರ್ಜ್ ಸುಬ್ರಹ್ಮಣ್ಯಪುರ ಪೊಲೀಸ್ಠಾಣೆಯನ್ನು ಲೋಕಾರ್ಪಣೆ ಮಾಡಿದರು.
Manjula VN
Updated On : 3 Jan 2016, 1:53 am

ಬೆಂಗಳೂರು: ನಗರದ ಗ್ರಾಫಿಕ್ ಸಮಸ್ಯೆ ನಿವಾರಿಸಲು ದೆಹಲಿ ಮಾದರಿ ಸಮ-ಬೆಸ ಯೋಜನೆಯನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಕಳೆದೊಂದು ವರ್ಷದಿಂದ ಉದ್ಘಾಟನೆಯಾಗದೆ ನನೆಗುದಿಗೆ ಬಿದ್ದಿದ್ದ ಸುಬ್ರಹ್ಮಣ್ಯಪುರ ಪೊಲೀಸ್ ವಸತಿ ಗೃಹ, ಜ್ಞಾನಭಾರತಿ ಠಾಣೆ, ಸಂಜಯï ನಗರ, ಗಂಗಮ್ಮನಗುಡಿ ಠಾಣೆ ಮತ್ತು ಠಾಣೆಗಳನ್ನು ಶನಿವಾರ ಲೋಕಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ದೆಹಲಿ ಮಾದರಿ ಸಂಚಾರ ನಿಯಮ ಕುರಿತು ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ. ಯಾವುದೇ ಯೋಜನೆ ಒಂದೇ ದಿನಕ್ಕೆ ಫಲ ನೀಡಿದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೂರಕವಾಗಿರುವ ಈ ಪ್ರಯೋಗ ಒಳ್ಳೆಯದು. ಇದರಿಂದ ಒಳ್ಳೆಯದಾದರೆ ನಾವಷ್ಟೇ ಅಲ್ಲ ಇಡೀ ದೇಶವೇ ಅಳವಡಿಸಿಕೊಳ್ಳುತ್ತ ದೆ. ಒಂದು ವೇಳೆ ಇದರಿಂದ ಟ್ರಾಫಿಕ್ ಸಮಸ್ಯೆ ಬಗೆ ಹರಿಸಬಹುದು ಎಂದಾದರೆ ಖಂಡಿತ ಬೆಂಗಳೂರಿನಲ್ಲೂ ಅಳವಡಿಸುತ್ತೇವೆ ಎಂದು ಹೇಳಿದರು.

ರಾಜ್ಯದ ಪೊಲೀಸರ ಯೋಗಕ್ಷೇಮವೇ ನಮಗೆ ಮುಖ್ಯ. ಅದರಲ್ಲೂ ಪೇದೆಗಳ ಯೋಗ ಕ್ಷೇಮಕ್ಕಾಗಿ ವಸತಿ ಗೃಹಗಳನ್ನು ನಿರ್ಮಿಸಿದ್ದೇವೆ. `ಗೃಹ' ಯೋಜನೆಯಡಿ ರಾಜ್ಯಾದ್ಯಂತ ಸುಮಾರು 3 ಸಾವಿರ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದ ಅವರು, ರಾಜ್ಯದಲ್ಲಿ ಶಾಂತಿ ನೆಲೆಸಲು ಹಗಲು ರಾತ್ರಿ ಕೆಲಸ ನಿರ್ವಹಿಸುವ ಮೂಲಕ ಪೊಲೀಸರು ತಮ್ಮ ಜೀವನವನ್ನೇ ಸಮರ್ಪಣೆ ಮಾಡುತ್ತಾರೆ. ಪೊಲೀಸರು ತಮ್ಮ ಜೀವದ ಹಂಗು ತೊರೆದು ನಮ್ಮ ರಕ್ಷಣೆ ಮಾಡುತ್ತಾರೆ. ಇಂತಹವರಿಗೆ ವಸತಿ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡುವುದು ಅಗತ್ಯವಿದೆ ಎಂದು ತಿಳಿಸಿದರು.

ಸಾಮಾನ್ಯವಾಗಿ ಪೊಲೀಸ್ ಇಲಾಖೆ ಎಂದರೆ ಅವರ ನ್ನು ಲಘುವಾಗಿ ಕಾಣುತ್ತಾರೆ. ಆದರೆ, ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸುವ ಕಾರಣ ಇಂದು ನಾವು ನೆಮ್ಮದಿಯಿಂದ ಓಡಾಡಲು ಸಾಧ್ಯವಾಗಿದೆ. ಎಲ್ಲ ಕಡೆ ಸಿಸಿಟಿವಿ ಅಳವಡಿಸಿದರೆ ಕಳ್ಳರು ಇರುವುದಿಲ್ಲ ಎಂಬುದು ಸುಳ್ಳು. ಸಿಸಿಟಿವಿ ಅಳವಡಿಸಿದಾಗಲೂ ಕಳ್ಳತನಗಳು ನಡೆಯುತ್ತವೆ. ಅಂತವರನ್ನು ಮಟ್ಟಹಾಕಲು ಪೊಲೀಸರ ಅವಶ್ಯಕತೆಯಿದೆ ಎಂದರು.

ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಕೊರತೆಯಿದೆ. ಈ ಸಮಸ್ಯೆ ನಿವಾರಿಸಲು ಸದ್ಯದಲ್ಲೇ 8 ಸಾವಿರ ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಬೆಂಗಳೂರು ನಗರ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್, ಸಂಸದ ಡಿ.ಕೆ. ಸುರೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಕಮಿಷನರ್ ಎನ್.ಎಸ್.ಮೇಘರಿಕ್, ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಸ್ಥಳೀಯ ಶಾಸಕರಾದ ಮುನಿರಾಜು, ಮುನಿರತ್ನ, ಎಂ.ಕೃಷ್ಣಪ್ಪ ಮತ್ತಿತರರು ಇದ್ದರು
 
ಸ್ಟುಡೆಂಟ್ ಪೊಲೀಸ್‍ಗೆ ಶ್ಲಾಘನೆ
`ಸ್ಟುಡೆಂಟ್ ಪೊಲೀಸ್' ಎಂಬ ಹೊಸ ಮಾದರಿಯ ಪ್ರಯೋಗ ನಡೆಯುತ್ತಿರುವುದು ಶ್ಲಾಘನೀಯ. ಶಾಲಾ ಮಕ್ಕಳಿಗಾಗಿ ಮಾಡುವ ಈ ಪ್ರಯೋಗ ಮಕ್ಕಳಲ್ಲಿ ಧೈರ್ಯ, ಶಿಸ್ತು
ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸಲು ಸಹಾಯವಾಗುತ್ತದೆ. ಈಗಾಗಲೇ 1,580 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಇದಕ್ಕಾಗಿ 9 ಕೋಟಿ ಹಣವನ್ನು ಸರ್ಕಾರ ನೀಡಿದೆ ಎಂದರು.

ಪೊಲೀಸರಿಗೆ ಅಭಿನಂದನೆ
ಕಳೆದೆರಡು ತಿಂಗಳಿನಿಂದ ನಗರದಲ್ಲಿ ಕೊಲೆ, ದರೋಡೆ, ಕಳ್ಳತನ, ಅತ್ಯಾಚಾರದಂತಹ ಅನೇಕ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಇತ್ತೀಚೆಗೆ ಮೂರು ಹಬ್ಬಗಳು ಒಟ್ಟಿಗೆ
ಬಂದಿದ್ದವು. ಈ ವೇಳೆ ಯಾವುದೇ ಅವಘಡಗಳು ನಡೆಯದಂತೆ ಪೊಲೀಸರು ಉತ್ತಮ ಕಾರ್ಯನಿರ್ವಹಿಸಿದ್ದರು. ಈ ಸಲುವಾಗಿ ಪೊಲೀಸರಿಗೆ ಅಬಿsನಂದನೆ ತಿಳಿಸಲು ಬಯಸುತ್ತೇನೆ ಎಂದು ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement