ಚಿತ್ರಸಂತೆಗೆ ಸಿಎಂ ಚಾಲನೆ ಇಂದು; ಸಂಜೆ 7ರ ತನಕ ಸಂಚಾರ ನಿರ್ಬಂಧ
50ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆ 60ಕ್ಕೂ ಹೆಚ್ಚು ಸಿಸಿ ಕ್ಯಾಮರಾ
ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ಪ್ರತಿವರ್ಷ ನಡೆಸುವ ಚಿತ್ರಸಂತೆಯು ಈ ಸಲ ಭಾನುವಾರ ಇಡೀ ದಿನ ನಡೆಯಲಿದೆ. ಈ ಸಂತೆಯಲ್ಲಿ ಗಣ್ಯರು, ಖ್ಯಾತ ಕಲಾವಿದರು
ಸೇರಿದಂತೆ ಭಾರಿ ಸಂಖ್ಯೆ ಯಲ್ಲಿ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಈ ಸಂತೆಯು ಶಿವಾನಂದ ಸರ್ಕಲ್ ನಿಂದ ವಿಂಡ್ಸರ್ ಮಾ್ಯನರ್ ಹೋಟೆಲ್ ವೃತ್ತದವರೆಗೆ ನಡೆಯಲಿದೆ. ಬೆಳಗ್ಗೆ 8ರಿಂದಲೇ ಚಿತ್ರಸಂತೆ ಆರಂಭವಾಗುತ್ತದೆ. 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮ ಯ್ಯ ಅವರು ಸಾಂಪ್ರದಾಯಿಕವಾಗಿ ಚಿತ್ರಸಂತೆಉದ್ಘಾಟಿಸುವರು. ಸಂತೆಯು ರಾತ್ರಿ 8ರವರೆಗೆ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಕುಮಾರಕೃಪಾ ರಸ್ತೆಯಲ್ಲಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಈ ರಸ್ತೆಯಲ್ಲಿ ಎಲ್ಲ ಮಾದರಿ ವಾಹನಗಳನ್ನು ನಿರ್ಬಂಧಿಸಲಾಗಿದೆ. ಅಂತೆಯೇ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ತಾತ್ಕಾಲಿಕವಾಗಿ ಬದಲಿ ಮಾರ್ಗ ಸೂಚಿಸಲಾಗಿದೆ. ಸಂತೆ ಮುಗಿದ ಕೂಡಲೇ ಎಲ್ಲ ಕಲಾವಿದರನ್ನೊಳಗೊಂಡಂತೆ `ಸ್ವಚ್ಛಭಾರತ ಅಭಿಯಾನ'ದ ಶೀರ್ಷಿಕೆಯಡಿ ಸ್ವಚ್ಛತಾ ಕಾರ್ಯ ನಡೆಯಲಿದೆ. ಮಾರ್ಗ ಬದಲು: ಮೆಜೆಸ್ಟಿಕ್‍ನಿಂದ ಬಳ್ಳಾರಿ ರಸ್ತೆ ಕಡೆಗೆ ಸಾಗುವ ಬಿಎಂಟಿಸಿ ಮತ್ತು ಕೆಎಸ್‍ಆರ್ ಟಿಸಿ ಬಸ್‍ಗಳು ರೇಸ್‍ವ್ಯೂ ಜಂಕ್ಷನ್‍ನಿಂದ ಮುಂದೆ ಸಾಗಿ ಟ್ರಿಲೈಟ್ ಜಂಕ್ಷನ್, ಬಸವೇಶ್ವರ ವೃತ್ತ, ಹಳೇ ಹೈಗ್ರೌಂಡ್ ಪೊಲೀಸ್ ಠಾಣೆ
ಜಂಕ್ಷನ್, ವಿಂಡ್ಸರ್ ಮಾ್ಯನರ್ ಜಂಕ್ಷನ್ ಮೂಲಕ ಬಳ್ಳಾರಿ ರಸ್ತೆ ಸೇರಬೇಕು.
ಇದೇ ಮಾರ್ಗದಲ್ಲಿ ಸಂಚರಿಸುವ ಲಘು ವಾಹನಗಳು ಶಿವಾನಂದ ವೃತ್ತದಲ್ಲಿ ಎಡ ತಿರುವು ಪಡೆದು ನೆಹರು ವೃತ್ತದಲ್ಲಿ ಯು ಟರ್ನ್ ಪಡೆದು ರೈಲ್ವೆ ಪ್ಯಾರಲಲ್ ರಸ್ತೆ, ಬಿಡಿಎ ಫ್ಲೈ ಓವರ್ ಮೂಲಕ ಬಳ್ಳಾರಿ ರಸ್ತೆಗೆ ಸಾಗಬೇಕು. ಬಳ್ಳಾರಿ ರಸ್ತೆ ಕಡೆಯಿಂದ ಮೆಜೆಸ್ಟಿಕ್ ಮತ್ತು ಕೆ.ಆರ್.ಮಾರ್ಕೆಟ್ ಕಡೆಗೆ ಸಾಗುವ ವಾಹನಗಳು ವಿಂಡ್ಸರ್ ಮಾ್ಯನರ್ ವೃತ್ತ, ಹಳೇ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಜಂಕ್ಷನ್, ಎಲ್‍ಆರ್‍ಡಿಇ ಜಂಕ್ಷನ್‍ನಲ್ಲಿ ಬಲತಿರುವು ಪಡೆದು ಬಸವೇಶ್ವರ ವೃತ್ತದ ಮೂಲಕ ಸಾಗಬೇಕೆಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.
ಚಿತ್ರಸಂತೆಗೆ ಪಾರ್ಕಿಂಗ್ ವ್ಯವಸ್ಥೆ