ವಿವೇಕ್ ಬ್ಯಾಂಡ್ ಅಭಿಯಾನ
ಸ್ವಾಮಿ ವಿವೇಕಾನಂದರ 153ನೇ ಜನ್ಮದಿನಾಚರಣೆ ಅಂಗವಾಗಿ ಸಮರ್ಥ ಭಾರತ ಟ್ರಸ್ಟ್ ನಿಂದ ಜ.12 ರಿಂದ 26ರವರೆಗೆ ರಾಜ್ಯಾದ್ಯಂತ `ವಿವೇಕ ಬ್ಯಾಂಡ್ ಅಭಿಯಾನ' ಹಮ್ಮಿಕೊಳ್ಳಲಾಗಿ ದೆ ಎಂದು ಅಭಿಯಾನದ ರಾಯಭಾರಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ...
ಬೆಂಗಳೂರು: ಸ್ವಾಮಿ ವಿವೇಕಾನಂದರ 153ನೇ ಜನ್ಮದಿನಾಚರಣೆ ಅಂಗವಾಗಿ ಸಮರ್ಥ ಭಾರತ ಟ್ರಸ್ಟ್ ನಿಂದ ಜ.12 ರಿಂದ 26ರವರೆಗೆ ರಾಜ್ಯಾದ್ಯಂತ `ವಿವೇಕ ಬ್ಯಾಂಡ್ ಅಭಿಯಾನ' ಹಮ್ಮಿಕೊಳ್ಳಲಾಗಿ ದೆ ಎಂದು ಅಬಿsಯಾನದ ರಾಯಭಾರಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಯುವಜನತೆಗೆ ತಲುಪಿಸುವುದು ಅಭಿಯಾನದ ಉದ್ದೇಶವಾಗಿದ್ದು, ವಿವೇಕಾನಂದರ ಸಂದೇಶಗಳನ್ನು ಒಳಗೊಂಡ ಬ್ಯಾಂಡ್‍ಗಳನ್ನು ಯುವಕರು ಕೈಯಲ್ಲಿ ಧರಿಸುವ ಮೂಲಕ ಸ್ವಯಂ ಪ್ರೇರಿತವಾಗಿ ಒಳ್ಳೆಯ ಕಾರ್ಯಗಳಲ್ಲಿ ಭಾಗವಹಿಸುವಂತೆ ಮಾಡಲಾಗುವುದು. ವಿವೇಕ್ ಬ್ಯಾಂಡ್ ಮೇಲೆ ಉತ್ತಮನಾಗು ಉಪಕಾರಿಯಾಗು ಎಂಬ ಸಂದೇಶಗಳನ್ನು ಮುದ್ರಿಸಲಾಗಿದ್ದು, ಬ್ಯಾಂಡ್ 5 ಬಣ್ಣಗಳಲ್ಲಿ ಲಭ್ಯವಿದೆ ಎಂದರು.
ಕಳೆದ ಬಾರಿಯ ಅಭಿಯಾನದಲ್ಲಿ 10ಲಕ್ಷ ಯುವಕರು ಭಾಗವಹಿಸಿದ್ದರು. ಈ ಬಾರಿ 12 ಲಕ್ಷ ಯುವಕರು ಅಬಿsಯಾನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ಜ.12ರಂದು ರಾಜ್ಯದಲ್ಲಿ 10 ಸಾವಿರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಬೆಂಗಳೂರಿನ 30 ಕಾಲೇಜುಗಳಲ್ಲಿ ನಡೆಸಲಾಗುವುದು ಎಂದು ಹೇಳಿದರು.
ಕೇಂದ್ರ ಸಚಿವರು, ಸಾಹಿತಿಗಳು ವಿಜ್ಞಾನಿಗಳು, ಕಲಾವಿದರು, ಕ್ರೀಡಾಪಟುಗಳು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಸಂಘ-ಸಂಸ್ಥೆಗಳು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ಜಿಲ್ಲಾ ಕೇಂದ್ರಗಳ ಪ್ರಮುಖ ಸ್ಥಳಗಳಲ್ಲಿ ಬ್ಯಾಂಡ್ ಗಳು ಲಭ್ಯವಾಗಲಿವೆ. ಒಂದು ಬ್ಯಾಂಡ್ ಗೆ ರು.10 ನಿಗದಿಪಡಿಸಲಾಗಿದ್ದು, ಬ್ಯಾಂಡ್ ಮಾರಾಟದಿಂದ ಬರುವ ಲಾಭವನ್ನು ಸಾಮಾಜಿಕ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು ಎಂದು ಸೂಲಿಬೆಲೆ ತಿಳಿಸಿದರು.
ಇದೇ ವೇಳೆ ಅವರು ಅಭಿಯಾನದ ಜಾಲತಾಣ www.vivekband.com ಗೆ ಚಾಲನೆ ನೀಡದರು. ಸುದ್ದಿಗೋಷ್ಠಿಯಲ್ಲಿ ಸಮರ್ಥ ಭಾರತ ಟ್ರಸ್ಟ್ ಅಧ್ಯಕ್ಷ ಪ್ರದೀಪ್ ಭಾರದ್ವಾಜ್, ಸದಸ್ಯೆ ಅಪರ್ಣ ಉಪಸ್ಥಿತರಿದ್ದರು.