ಬೆಂಗಳೂರು: ರಾಜ್ಯದಲ್ಲಿ ಒಟ್ಟು ರು.18,042.02 ಕೋಟಿ ನೂತನ ಉದ್ಯಮ ಹೂಡಿಕೆಗೆ ಸಿಎಂ ನೇತೃತ್ವದ 42ನೇ ರಾಜ್ಯ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿದೆ. ಜೊತೆಗೆ 3 ವಿಸ್ತರಣಾ ಯೋಜನೆಗೂ ಒಪ್ಪಿಗೆ ನೀಡಲಾಗಿದ್ದು, ರು.23, 382, 20 ಕೋಟಿ ಹೂಡಿಕೆ ಮಾಡಲು ಸಮ್ಮತಿ ಸೂಚಿಸಲಾಗಿದ್ದು, ಇದರಿಂದ ರಾಜ್ಯದಲ್ಲಿ 10, 407 ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.
ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯಲ್ಲಿ 3 ನೂತನ ಯೋಜನೆಗಳು ಹಾಗೂ ಒಟ್ಟಾರೆ ರು.5, 340 ಕೋಟಿ 3 ವಿಸ್ತರಣಾ ಯೋಜನೆಗಳಿಗೆ ಒಪ್ಪಿಗೆ ನೀಡಲಾಯಿತು. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್, ಕೈಗಾರಿಕಾ ಇಲಾಖೆ ಸೇರಿ ಸರ್ಕಾರ ವಿವಿಧ ಇಲಾಖೆಯ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.
ಬಳ್ಳಾರಿಯ ಸಂಡೂರು ತಾಲೂಕಿನ ಎರದಾನ ಹಳ್ಳಿಯಲ್ಲಿ ಮಿನೇರಾ ಸ್ಟೀಲ್ ಪ್ರೈ.ಘಿ.ಲಿ.ಸಂಸ್ಥೆ ಸ್ಥಾಪನೆಯ ಪ್ರಸ್ತಾವನೆ ಅಂಗೀಕರಿಸಲಾಗಿದ್ದು, ರು.1,889.30 ಕೋಟಿ ಹೂಡಿಕೆಯಾಗಲಿದೆ. ಕಲಬುರ್ಗಿಯ ಚಿತ್ತಾಪುರದಲ್ಲಿ ರು.1,352.90 ಕೋಟಿ ವೆಚ್ಚದಲ್ಲಿ ವಾಡಿ ಸಿಮೆಂಟ್ ಕಂಪನಿ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ. ತುಮಕೂರಿನ ಪಾವಗಡದಲ್ಲಿರುವ ಬಾಲಸುಮುದ್ರ, ತಿರುಮಾಣಿ, ಕ್ಯಾತಗಂಚರಲು, ವಲ್ಲೂರು ಹಾಗೂ ರಾಯಚೂರು ಗ್ರಾಮಗಳಲ್ಲಿ ಕರ್ನಾಟಕ ಸೌರ ವಿದ್ಯುತ್ ಅಭಿವೃದ್ಧಿ ನಿಗಮ ನಿಯಮಿತದ ರು. 14,800 ಕೋಟಿ ವೆಚ್ಚದ ಸೋಲಾರ್ ಪಾರ್ಕ್ ಯೋಜನೆಗೆ ಒಪ್ಪಿಗೆ ನೀಡಿದೆ.
ಉಡುಪಿ ವಿದ್ಯುತ್ ರು.4,570 ಕೋಟಿ ನೀಡಲು ಸಮಿತಿ ಒಪ್ಪಿಗೆ ನೀಡಲಾಗಿದೆ. ಆನೇಕಲ್‍ನಲ್ಲಿರುವ ಕಿರ್ಲೋಸ್ಕರ್ ಟೊಯೊಟಾ ಟೆಕ್ಸ್ ಟೈಲ್ ಮಶೀನರಿ ಸಂಸ್ಥೆಯ ವಿಸ್ತರಣೆಗೆ ರು.150 ಕೋಟಿ, ಕೋಲಾರದ ಟಾಟಾ ಪವರ್ ಕಾರ್ಪೊರೇಷನ್ ವಿಸ್ತರಣೆಗಾಗಿ ರು.620 ಕೋಟಿ ಹೂಡಿಕೆಗೆ ಅವಕಾಶ ಮಾಡಿಕೊಡಲಾಗಿದೆ.