ಲಕ್ಷಾಂತರ ರು. ವಂಚನೆ: ಮಹಿಳೆ ಸೆರೆ
ಚೀಟಿ ಹೆಸರಿನಲ್ಲಿ ಜನರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಪರಾರಿಯಾಗಿದ್ದ ಮಹಿಳೆಯೊಬ್ಬರನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ...
ಬೆಂಗಳೂರು: ಚೀಟಿ ಹೆಸರಿನಲ್ಲಿ ಜನರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ಪರಾರಿಯಾಗಿದ್ದ ಮಹಿಳೆಯೊಬ್ಬರನ್ನು ಚಂದ್ರಲೇಔಟ್ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಪ್ರಮಿಳಾ (37) ಬಂಧಿತ ಆರೋಪಿ. ಗಂಗಾವತಿ ಮೂಲದ ಈಕೆ ಕೆಲ ವರ್ಷ ಗಳಿಂದ ನಗರದ ಮೂಡಲಪಾಳ್ಯದಲ್ಲಿ ವಾಸವಿದ್ದರು. ಈ ವೇಳೆ ನೆರೆಹೊರೆಯ ನಿವಾಸಿಗಳಿಂದ ಚೀಟಿ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಸಂಗ್ರಹಿಸಿದ್ದರು.
ಇತ್ತೀಚಗೆ ಚೀಟಿದಾರರು ಹಣ ಕೇಳದರೆ ಏನಾದರೂ ಕಾರಣ ಹೇಳಿ ದಿನ ದೂಡುತ್ತಿದ್ದರು. ಹೀಗೆ ಒಂದು ಹಂತದಲ್ಲಿ ಚೀಟಿದಾರರಿಂದ ಒತ್ತಡ ಹೆಚ್ಚಾದಾಗ ಇದ್ದಕ್ಕಿದ್ದ ಹಾಗೆ ಮನೆ ಖಾಲಿ ಮಾಡಿಕೊಂಡು ತೆರಳಿದ್ದರು. ಹಣ ನೀಡಿ ಮೋಸ ಹೋದ ಚೀಟಿದಾರರು ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಮೀಳಾ ಪತಿ ಮಂಜುನಾಥ್ ಮಹಿಳೆಯೊಬ್ಬರ ಜತೆ ಅನೈತಿಕ ಸಂಬಂಧ ಹೊಂದಿದ್ದರು. ಈ ಕುರಿತು ಆರೋಪಿ ಪತಿಗೆ ತಿಳಿ ಹೇಳಿದ್ದರು. ಇದಕ್ಕೆ ಪತ್ನಿ ಮೇಲೆ ಮುನಿಸಿಕೊಂಡ
ಮಂಜುನಾಥ್ 2014ರಲ್ಲಿ ಯಾವುದೋ ಕಾರಣಕ್ಕೆ ಮಹಿಳೆಯ ಮಗುವನ್ನು ಕೊಲೆ ಮಾಡಿದ್ದ. ಈ ಸಂಬಂಧ ನಗರದ ಸೆಷನ್ಸ್ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಹಾಗಾಗಿ ಪತಿ ಜತೆಗೆ ಪ್ರಮಿಳಾ ಕೂಡ ಸಾಕ್ಷಿ ಹೇಳಲು ನ್ಯಾಯಾಲಕ್ಕೆ ಬಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಅಲ್ಲಿಗೆ ತೆರಳಿ ಆಕೆಯನ್ನು ಬಂಧಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.