ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಆರೋಪಿಯನ್ನು ಬಂಧಿಸಿರು.1 ಲಕ್ಷ ನಗದು, ಮೂರು ಮೊಬೈಲ್ ಫೋನ್, ಟಿವಿ ಸೇರಿದಂತೆ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ಯಾಲೇಸ್ ಗುಟ್ಟಹಳ್ಳಿಯ ಕಿಶೋರ್ ನಂದಲಾಲ್ (35) ಬಂಧಿತ. ಜ.1ರಂದು ಸಿಡ್ನಿ ಪರ್ಥ್ ಸ್ಕಾಚರ್ಸ್ ಮತ್ತು ಸಿಡ್ನಿ ಥಂಡರ್ ತಂಡದ ನಡುವಿನ ಬಿಗ್ ಬ್ಯಾಷ್ ಟಿ-20 ಕ್ರಿಕೆಟ್ ಪಂದ್ಯದ
ಸೋಲು-ಗೆಲುವು ಆಧರಿಸಿ ಸಾರ್ವಜನಿಕರಿಂದ ಹಣ ಪಣವಾಗಿರಿಸಿಕೊಂಡು ಜೂಜಾಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಮನೆ ಮೇಲೆ ದಾಳಿ ನಡೆಸಿದ್ದಾರೆ.
ಆರೋಪಿಯನ್ನು ಬಂಧಿಸಿ ನಗದು ಮೊಬೈಲ್, ಲ್ಯಾಪ್‍ಟಾಪ್, ಟಿವಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.