ಬೆಂಗಳೂರು: ರಂಗಭೂಮಿ ಹಾಗೂ ಚಲನಚಿತ್ರ ನಟ ಪ್ರಕಾಶ್ ಬೆಳವಾಡಿ ಅವರ ಬ್ಯಾಂಕ್ ಖಾತೆಯ ಒನ್‍ಟೈಂ ಪಾಸ್‍ವರ್ಡ್(ಓಟಿಪಿ) ನಕಲು ಮಾಡಿ ದುಷ್ಕರ್ಮಿಯೊಬ್ಬ ರು.90 ಸಾವಿರ ಡ್ರಾ ಮಾಡಿ ವಂಚಿಸಿರುವ ಘಟನೆ ಶುಕ್ರವಾರ ನಡೆದಿದೆ.
ಬೆಳವಾಡಿ ಅವರು ಮಧ್ಯಾಹ್ನ ಮನೆಯಲ್ಲಿ ಯಾವುದೋ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರ ಪತ್ನಿ ಮೊಬೈಲ್‍ಗೆ ಕರೆಯೊಂದು ಬಂದಿದೆ. ಅದನ್ನು ಸ್ವೀಕರಿಸಿದ ಬೆಳವಾಡಿ ಅವರ
ಪತ್ನಿ ಫೋನ್‍ನಲ್ಲಿ ನಿರತರಾಗಿದ್ದರು. ಆಗ ತಮ್ಮ ಕೆಲಸಕ್ಕೆ ತೊಂದರೆಯಾಗುತ್ತಿದ್ದು, ಆ ಕಡೆ ತೆರಳಿ ಮಾತನಾಡುವಂತೆ ಪತ್ನಿಗೆ ಬೆಳವಾಡಿ ಹೇಳಿದ್ದಾರೆ. ಆಗ ಪಕ್ಕದ ಕೊಠಡಿಗೆ ತೆರಳಿ ಮಾತು ಮುಂದುವರಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಬೆಳವಾಡಿ ಅವರ ಮೊಬೈಲ್‍ಗೆ ಓಟಿಪಿ ಸಂಖೆಯ ಸಂದೇಶ ಬಂದಿದೆ. ಅದನ್ನು ಪತ್ನಿಗೆ ತಿಳಿಸಿದ ಬೆಳವಾಡಿ ತಮ್ಮ ಕೆಲಸ
ಮುಂದುವರಿಸಿದ್ದಾರೆ. ಆಗ ಪತ್ನಿ ಮೊಬೈಲ್‍ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗೆ ಓಟಿಪಿ ಸಂಖ್ಯೆ ಕೂಡ ಹೇಳಿದ್ದಾರೆ.
ಬಳಿಕ ಪತ್ನಿ ಹತ್ತಿರ ಧಾವಿಸಿದ ಬೆಳವಾಡಿ ಅವರು ಮೊಬೈಲ್‍ನಲ್ಲಿ ತಾನೇ ಮಾತನಾಡುವುದಾಗಿ ತಿಳಿಸಿ ಮೊಬೈಲ್ ಪಡೆದಿದ್ದಾರೆ. ಅಷ್ಟರಲ್ಲಿ ಆ ವ್ಯಕ್ತಿ ಕರೆ ಸ್ಥಗಿತಗೊಳಿಸಿದ್ದಾನೆ. ಅವರ ಖಾತೆಯಿಂದ ರು.90 ಸಾವಿರ ಹಣ ಡ್ರಾ ಆ ಸಂದೇಶ ಬಂದಿದೆ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.