ಅತ್ಯಾಚಾರಿ ಸೈಕೋ ಕಿಲ್ಲರ್ ಬಂಧನ
ಲೈಂಗಿಕ ಕಿರುಕುಳ ನೀಡಿ ಮಹಿಳೆಯರನ್ನು ಹತ್ಯೆ ಮಾಡಿ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ಸೈಕೋ ಕಿಲ್ಲರ್ ಅಮರ್‍ನನ್ನು ಎಚ್‍ಎಸ್‍ಆರ್ ಲೇಔಟ್ ಪೊಲೀಸರು ಶನಿವಾರ ಬಂಧಿಸಿದ್ದಾರೆ...
ಬೆಂಗಳೂರು: ಲೈಂಗಿಕ ಕಿರುಕುಳ ನೀಡಿ ಮಹಿಳೆಯರನ್ನು ಹತ್ಯೆ ಮಾಡಿ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ ಸೈಕೋ ಕಿಲ್ಲರ್ ಅಮರ್‍ನನ್ನು ಎಚ್‍ಎಸ್‍ಆರ್ ಲೇಔಟ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕೋಲ್ಕತಾ ಮೂಲದ ಜೆ.ಪಿ.ನಗರ ವಾಸಿ ಅಮರ್ ಸರ್ಕಾರ್ (30) ಬಂಧಿತ ಸೈಕೋ ಕಿಲ್ಲರ್. ಈತ ಜ.4ರಂದು ಉತ್ತರಪ್ರದೇಶ ಮೂಲದ ಸಿದ್ದಾಪುರ ನಿವಾಸಿ, ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕಳಾಗಿದ್ದ ಛಾಯಾದೇವಿ (40) ಎಂಬಾಕೆಯನ್ನು ಸರ್ಜಾಪುರ ರಸ್ತೆ ಆಡು ಸಿದಾಟಛಿಪುರ ಬಳಿಯ ನೀಲಗಿರಿ ತೋಪಿನಲ್ಲಿ ನೇಣು ಬಿಗಿದು ಹತ್ಯೆ ಮಾಡಿ ಪರಾರಿಯಾಗಿದ್ದ. ಅಲ್ಲದೇ ಈತ ಲೈಂಗಿಕ ಕ್ರಿಯೆಗೆ ಸಹಕರಿಸಿಲ್ಲ ಎಂದು ತನ್ನ ಪತ್ನಿ ಜಯಂತಿಯನ್ನೇ 2014ರಲ್ಲಿ ಹತ್ಯೆ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಬಿಡುಗಡೆಯಾದ ನಂತರ ಕಟ್ಟಡವೊಂದರಲ್ಲಿ ಕೆಲಸ ಪಡೆದು, ಅಲ್ಲಿಯೇ ಕಾರ್ಮಿಕಳಾಗಿದ್ದ ಛಾಯಾದೇವಿ ಜತೆ ಸ್ನೇಹ ಬೆಳೆಸಿದ್ದ. ನಂತರ ಆಕೆಯೊಂದಿಗಿನ ಸ್ನೇಹವು ಅನೈತಿಕ ಸಂಬಂಧಕ್ಕೆ ತಿರುಗಿತ್ತು.
ಈ ನಡುವೆ ಜ.4ರಂದು ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಇದರಿಂದ ಕೋಪಗೊಂಡ ಅಮರ್ ಆಕೆಯನ್ನು ನೇಣು ಹಾಕಿ, ಮೃತದೇಹವನ್ನು ಸಮೀಪದ ನೀಲಗಿರಿ
ತೋಪಿನಲ್ಲಿ ಎಸೆದು ಆಕೆಯ ಬಳಿಯಿದ್ದ ನಗದು, ಮೊಬೈಲ್ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಎಚ್‍ಎಸ್ ಆರ್ ಲೇಔಟ್ ಠಾಣೆ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಪರಾರಿಯಾಗಿದ್ದ ಆರೋಪಿ ಕುಂದಲಹಳ್ಳಿ ಸಮೀಪದ ಅಪಾರ್ಟ್‍ಮೆಂಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಇದೀಗ ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.