ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಉಪನ್ಯಾಸದ ಮೂಲಕ ಎತ್ತಿನಹೊಳೆಗೆ ವಿರೋಧ!

ಎತ್ತಿನಹೊಳೆ ಯೋಜನೆಗೆ ಹಸಿರು ನ್ಯಾಯಾಧಿಕರಣದ ಚೆನ್ನೈ ಹಸಿರು ಪೀಠ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಯೋಜನೆಯ ವಿರುದ್ಧಿದ ಕಾವು ಹೆಚ್ಚಾಗುತ್ತಿದ್ದು, ಭಾನುವಾರ ಪುತ್ತೂರಿನ ಪುರಭವನದಲ್ಲಿ ಯೋಜನೆ ಯನ್ನು ವಿರೋಧಿಸಿ ಯೋಜನೆಯ ಸಾಧಕ ಬಾಧಕಗಳ ಬಗ್ಗೆ...

(ಸಾಂದರ್ಭಿಕ ಚಿತ್ರ)
Manjula VN
Updated On : 11 Jan 2016, 10:37 am

ಬೆಂಗಳೂರು: ಎತ್ತಿನಹೊಳೆ ಯೋಜನೆಗೆ ಹಸಿರು ನ್ಯಾಯಾಧಿಕರಣದ ಚೆನ್ನೈ ಹಸಿರು ಪೀಠ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಯೋಜನೆಯ ವಿರುದ್ಧಿದ ಕಾವು ಹೆಚ್ಚಾಗುತ್ತಿದ್ದು, ಭಾನುವಾರ ಪುತ್ತೂರಿನ ಪುರಭವನದಲ್ಲಿ ಯೋಜನೆ ಯನ್ನು ವಿರೋಧಿಸಿ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಉಪನ್ಯಾಸ ಮತ್ತು ಸಂವಾದದ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಲಾಯಿತು.

ಪರಿಸರ ತಜ್ಞ ಸುಂದರ್ ರಾವ್ ಉಪನ್ಯಾಸ ನೀಡಿ, `ಎತ್ತಿನಹೊಳೆ ಯೋಜನೆ ಕುಡಿಯುವ ನೀರಿನ ಯೋಜನೆಯಾಗಿರದೆ, ಕೆರೆಗಳಲ್ಲಿ ನೀರನ್ನು ತುಂಬಿಸಿ ಮಾರಾಟ ಮಾಡುವ ದಂಧೆಯಾಗಿದೆ. ಈ ಭಾಗ ದ ಜನರನ್ನು ಸೇರಿದಂತೆ ಎಲ್ಲರನ್ನೂ ವಂಚಿಸಲಾಗುತ್ತಿದೆ' ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಮಾತನಾಡಿ `ಮಹದಾಯಿ ಯೋಜನೆ, ಕೃಷ್ಣ ಜಲಭಾಗ್ಯ ನಿಗಮ, ನೀರು ಹಂಚಿಕೆ, ದ.ಕ. ಕಾವೇರಿ ನದಿ ನೀರು ಹಂಚಿಕೆ ವಿಚಾರ ಗಮನಿಸಿ ದಾಗ ಎಲ್ಲ ಸಂದರ್ಭದಲ್ಲೂ ಕರ್ನಾಟಕಕ್ಕೆ ಅತ್ಯಂತ ಗರಿಷ್ಠ ಪ್ರಮಾಣದ ಅನ್ಯಾಯವಾಗಿದೆ. ಇದೀಗ ಎತ್ತಿನಹೊಳೆ ಯೋಜನೆಯಲ್ಲೂ ದ.ಕ. ಜಿಲ್ಲೆಗೆ ಅನ್ಯಾಯವಾಗಲಿದೆ. ದ.ಕ. ಜಿಲ್ಲೆಯ ಜನರು ಎಚ್ಚೆತ್ತುಕೊಳ್ಳ ಬೇಕಾಗಿದೆ' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement