ಬೆಂಗಳೂರು: ಮೌಲ್ವಿ ಸೈಯ್ಯದ್ ಅನ್ಜರ್ ಶಾ ಖಾಸ್ಮಿ ಅವರನ್ನು ದೆಹಲಿ ಪೊಲೀಸರು ಯಾವುದೇ ಮಾಹಿತಿ ನೀಡದೆ ಏಕಾಏಕಿ ಬಂಧಿಸಿ ಕರೆದುಕೊಂಡು ಹೋಗಿದ್ದಾರೆ ಎಂದು ಖಾಸ್ಮಿ ತಂದೆ ಮೋಹಿನ್ ಶಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಮೌಲ್ವಿ ಸೈಯ್ಯದ್ ಅನ್ಜರ್ ಶಾ ಖಾಸ್ಮಿ ಕುರಾನ್ ಲ್ಲಿರುವ ವ್ಯತ್ಯಾಸಗಳ ಬಗ್ಗೆ ಮಸೀದಿಗಳಲ್ಲಿ ತಿಳಿ ಹೇಳುತ್ತಿದ್ದರೇ ಹೊರತು, ಯುವಕರಿಗೆ ಆಲ್ ಖೈದ್ ಸೇರುವಂತೆ ಪ್ರೇರೇಪಿಸುತ್ತಿರಲಿಲ್ಲ.
ಪ್ರಚೋದನಾಕಾರಿ ಪ್ರವಚನ ನೀಡುತ್ತಿದ್ದರು ಎಂಬುದು ಸುಳ್ಳು, ಯಾವೊಬ್ಬ ಧರ್ಮಗುರುವೂ ಆ ರೀತಿ ಮಾಡಲು ಸಾಧ್ಯವಿಲ್ಲ. ಪೊಲೀಸರಿಗೆ ತನಿಖೆ ನಡೆಸುವ ಸಂಪೂರ್ಣ ಹಕ್ಕಿದೆ. ಆದರೆ, ಏಕಾಏಖಿ ಬಂಧಿಸಿ ಅಪರಾಧಿ ಪಟ್ಟ ಕಟ್ಟಿ ಬಿಂಬಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ದಾಖಲೆಗಳು, ಸಾಕ್ಷ್ಯಾಧಾರಗಳಿದ್ದರೆ ಕಾನೂನು ಪ್ರಕಾರ ತನಿಖೆ ನಡೆಯಲಿ, ಆದರೆ,ತಪ್ಪು ಮಾಡೇ ಬಿಟ್ಟಿದ್ದಾರೆಂಬಂತೆ ಮಾಧ್ಯಮದವರೂ ಪ್ರಸಾರ ಮಾಡುತ್ತಿದ್ದಾರೆ ಎಂದು ಹೇಳಿದರು.