ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಬಿಬಿಎಂಪಿಯಲ್ಲಿ ಕನ್ಸಲ್ಟೆನ್ಸಿ ಮಾಫಿಯಾ

ಬಿಬಿಎಂಪಿಯಲ್ಲಿ ಖಾಸಗಿ ಕನ್ಸಲ್ಟೆನ್ಸಿ (ತಾಂತ್ರಿಕ ಸಲಹಾ ಸಂಸ್ಥೆ) ಉಖಿSಪಿsಯಾ ಹೆಚ್ಚಾಗುತ್ತಿದ್ದು, ಆಯುಕ್ತರು ಸೂಕ್ತ ತನಿಖೆ ನಡೆಸಬೇಕು ಎಂದು ಮಾಜಿ ಉಪ ಮೇಯರ್ ಹರೀಶ್ ಒತ್ತಾಯಿಸಿದರು...

(ಸಂಗ್ರಹ ಚಿತ್ರ)
Manjula VN
Updated On : 15 Jan 2016, 11:57 am

ಬೆಂಗಳೂರು: ಬಿಬಿಎಂಪಿಯಲ್ಲಿ ಖಾಸಗಿ ಕನ್ಸಲ್ಟೆನ್ಸಿ (ತಾಂತ್ರಿಕ ಸಲಹಾ ಸಂಸ್ಥೆ) ಮಾಫಿಯಾ ಹೆಚ್ಚಾಗುತ್ತಿದ್ದು, ಆಯುಕ್ತರು ಸೂಕ್ತ ತನಿಖೆ ನಡೆಸಬೇಕು ಎಂದು ಮಾಜಿ ಉಪ ಮೇಯರ್ ಹರೀಶ್ ಒತ್ತಾಯಿಸಿದರು.

ಪಾಲಿಕೆಯಲ್ಲಿ ಹಿರಿಯ ಎಂಜಿನಿಯರುಗಳು, ತಜ್ಞರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಎಂಜಿನಿಯರುಗಳಿದ್ದಾರೆ. ಆದರೂ, ಸಣ್ಣಪುಟ್ಟ ಕಾಮಗಾರಿಗಳನ್ನು ಕನ್ಸಲ್ಟೆನ್ಸಿಗಳಿಗೆ
ನೀಡುವ ಮೂಲಕ ಸಾರ್ವಜನಿಕರ ಹಣವನ್ನು ಪೊೀಲು ಮಾಡುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದರು.ಎಲ್ಲ ಕಾಮಗಾರಿಗಳನ್ನು
ಕನ್ಸಲ್ಟೆನ್ಸಿಗಳಿಗೆ ವಹಿಸುವುದಾದರೆ, ಪಾಲಿಕೆಯಲ್ಲಿ ಎಂಜಿ ನಿ ಯರುಗಳು ಏಕೆ ಬೇಕು? ಮೇಲ್ಸೇತುವೆ, ಅಂಡರ್‍ಪಾಸ್, ರೈಲ್ವೆ ಬ್ರಿಡ್ಜ್ ಸೇರಿದಂತೆ ದೊಡ್ಡ ಕಾಮಗಾರಿಗಳನ್ನು ಕನ್ಸಲ್ಟೆನ್ಸಿಗಳಿಗೆ
ವಹಿಸಬೇಕು. ಆದರೆ, ಪಾಲಿಕೆ ಎಂಜಿನಿಯರುಗಳು ಗೋಡೆ ನಿರ್ಮಾಣ, ಕಾಂಪೌಂಡ್, ರಾಜಕಾಲುವೆ, ಭಜನಾ ಮಂದಿರ, ಕಾಂಕ್ರಿಟ್ ರಸ್ತೆ ಸೇರಿದಂತೆ ಸಣ್ಣ ಕಾಮಗಾರಿಗಳನ್ನು ಕನ್ಸಲ್ಟೆನ್ಸಿಗಳಿಗೆ ವಹಿಸುತ್ತಿದ್ದಾರೆ.

ಇಂತಹ ನಿರ್ಲಕ್ಷ್ಯ ಎಂಜಿನಿಯರು ಗಳು ಪಾಲಿಕೆಗೆ ಅವಶ್ಯಕವಿಲ್ಲ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಾಮಗಾರಿಗಳ ಬಗ್ಗೆ ಸಲಹೆ
ಪಡೆಯಲು ಕನ್ಸಲ್ಟೆನ್ಸಿಗಳಿಗೆ ಸುಮಾರು ಶೇ. 3 ರಿಂದ 4ರಷ್ಟು ಕಮಿಷನ್ ನೀಡಬೇಕು. ಹೀಗಾಗಿ ಈ ಮಾಫಿಯಾದಿಂದ ಪಾಲಿಕೆಗೆ ಸುಮಾರು ರು.35 ರಿಂದ ರು.40 ಕೋಟಿ ನಷ್ಟವಾಗಿದೆ. ಮಾನ್ಯತಾ, ಸ್ಟುಫ್ ಸೇರಿದಂತೆ ನೂರಾರು ಕನ್ಸಲ್ಟೆನ್ಸಿ ಸಂಸ್ಥೆಗಳು ಹುಟ್ಟಿಕೊಂಡಿವೆ. ಇವೆಲ್ಲವು ಪಾಲಿಕೆ ಹಣವನ್ನು ಲೂಟಿ ಮಾಡುತ್ತಿವೆ ಎಂದು ಎಸ್.ಹರೀಶ್ ಆರೋಪಿಸಿದರು. ಇದೆ ಸಂದರ್ಭದಲ್ಲಿ ಅವರು ಸಂಬಂಧಪಟ್ಟ ದಾಖಲೆಗಳನ್ನು ಪ್ರದರ್ಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement