ಬೆಂಗಳೂರು: ಗೂಡ್ಸ್ ಟೆಂಪೊ, ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ 11 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಿ.ವಿ.ರಾಮನ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಮೊಹಿತ್ (11) ಮೃತಪಟ್ಟ ಬಾಲಕ. ತಂದೆ ಸೂರ್ಯನಾರಾಯಣ್ (45) ಗಂಭೀರವಾಗಿ ಗಾಯಗೊಂಡು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೌರಿಂಗ್ ಇನ್‍ಸ್ಟಿಟ್ಯೂಟ್‍ನಲ್ಲಿ ಈಜು ತರಬೇತುದಾರರಾಗಿ ಕೆಲಸ ಮಾಡುತ್ತಿರುವ ಜಾಲಹಳ್ಳಿ ನಿವಾಸಿ ಸೂರ್ಯನಾರಾಯಣ್, ತಮ್ಮ ಮಗ ಮೊಹಿತ್ ಜೊತೆ ಮಂಗಳವಾರ ಬೆಳಗ್ಗೆ ಬೈಕ್‍ನಲ್ಲಿ ಜಾಲಹಳ್ಳಿ ಬಳಿಯಿರುವ ಓಂ ಶಕ್ತಿ ದೇವಸ್ಥಾನಕ್ಕೆ ಹೋಗುತ್ತಿದ್ದರು.
ಈ ವೇಳೆ ಸಿ.ವಿ.ರಾಮನ್ ರಸ್ತೆಯ ಸಿಪಿಆರ್‍ಐ ಗೇಟ್ ಬಳಿ ಸಿಮೆಂಟ್ ಇಟ್ಟಿಗೆ ಸಾಗಿಸುತ್ತಿದ್ದ ಗೂಡ್ಸ್ ಟೆಂಪೊ ಸೂರ್ಯನಾರಾ ಯಣ್ ಬೈಕ್‍ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಮೊಹಿತ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿ ದ್ದಾನೆ. ಸೂರ್ಯನಾರಾಯಣ್‍ರ ಕಾಲು ಮುರಿದಿದೆ. ಅಪಘಾತ ಸಂಭವಿಸಿ ದ ನಂತರ ಚಾಲಕ ಟೆಂಪೊ ಬಿಟ್ಟು ಪರಾರಿಯಾಗಿದ್ದಾನೆ.