ಆಡಳಿತಾಧಿಕಾರಿಯ ನೇಮಿಸಬಾರದೇಕೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಲೆಕ್ಕ ಪರಿಶೋಧನೆಗೆ ಒಳಪಡಿಸದ ಸಂಬಂಧ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಪಾಲಿಕೆಯ ಲೆಕ್ಕ ಪರಿಶೋಧನೆ ಸರಿ ಪಡಿಸಲು ಆಡಳಿತಾಧಿಕಾರಿಯನ್ನೇಕೆ ನೇಮಿಸಬಾರದು ಎಂದು ಸರ್ಕಾರವನ್ನು ಮೌಖಿಕವಾಗಿ ಪ್ರಶ್ನಿಸಿದೆ...
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಲೆಕ್ಕ ಪರಿಶೋಧನೆಗೆ ಒಳಪಡಿಸದ ಸಂಬಂಧ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಪಾಲಿಕೆಯ ಲೆಕ್ಕ ಪರಿಶೋಧನೆ ಸರಿ ಪಡಿಸಲು ಆಡಳಿತಾಧಿಕಾರಿಯನ್ನೇಕೆ ನೇಮಿಸಬಾರದು ಎಂದು ಸರ್ಕಾರವನ್ನು ಮೌಖಿಕವಾಗಿ ಪ್ರಶ್ನಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆಂತರಿಕ ಲೆಕ್ಕಪರಿಶೋಧನೆ ನಡೆಸದಿರುವುದು ಮತ್ತು ಆಂತರಿಕ ಲೆಕ್ಕ ಪರಿಶೋಧನೆ ನಡೆಸುವುದರಲ್ಲಿ ವಿಫಲರಾಗಿರುವ ಆಧಿಕಾರಿಗಳ ವಿರುದಟಛಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೋರಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು ನ್ಯಾ.ರವಿಮಳಿಮಠ ಅವರಿದ್ದ ನ್ಯಾಯಪೀಠ, ಪಾಲಿಕೆಯಲ್ಲಿನ ಲೆಕ್ಕ ಪರಿಶೋಧನೆ ಸರಿಪಡಿಸುವುದಕ್ಕಾಗಿ ಪಾಲಿಕೆ ಯನ್ನು ವಿಸರ್ಜಿಸಿ ಆಡಳಿತಾಧಿಕಾರಿಯನ್ನು ಏಕೆ ನೇಮಿಸಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಾದ ಸಜ್ಜನ್ ಪೂವಯ್ಯ, ಕೆಎಂಸಿ ಕಾಯಿದೆಯ ಪ್ರಕಾರ ಪಾಲಿಕೆಯ ಆಯುಕ್ತರ ಹೆಸರಿನಲ್ಲಿ ಮಾತ್ರ ಬ್ಯಾಂಕ್ ಖಾತೆ ಇರಬೇಕು ಎಂಬ ನಿಯಮವಿದೆ. ಆದರೆ, ಪಾಲಿಕೆಯ ಅಧಿಕಾರಿಗಳು ತಮ್ಮ ಸ್ವಂತ ಮಾಹಿತಿ ಮತ್ತು ವಿಳಾಸವನ್ನು ನೀಡಿ ಖಾತೆಗಳನ್ನು ತೆರೆದುಕೊಂಡಿದ್ದಾರೆ. ಅಲ್ಲದೆ, ಪಾಲಿಕೆ ವ್ಯಾಪ್ತಿಯನ್ನು ಮೀರಿ ಖಾತೆಗಳನ್ನು ತೆರೆದಿರುವ ಉದಾಹರಣೆಗಳಿವೆ. ಜತೆಗೆ ಸುಮಾರು 600ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಪಾಲಿಕೆ ಅಧಿಕಾರಿಗಳು ತೆರೆದಿದ್ದರು ಎಂಬ ಆರೋಪವಿದ್ದು, ಒಂದೇ ಸಂಸ್ಥೆಗೆ ಸೇರಿದಇಷ್ಟೊಂದು ಖಾತೆಗಳು ತೆರೆದಿರುವ ಸಂಬಂಧ ತನಿಖೆ ನಡೆಸಬೇಕು. ಮತ್ತು ಮಹಾಲೇಖ ಪಾಲಕರಿಂದ ಪಾಲಿಕೆಯಲ್ಲಿನ ಲೆಕ್ಕ ಪರಿಶೋಧನೆ ನಡೆಸುವುದಕ್ಕೆ ಸೂಚನೆ ನೀಡಬೇಕು. ಅಲ್ಲದೆ, ಕಳೆದ 2011ರಿಂದ ನಡೆದಿರುವ ಆಂತರಿಕ ಲೆಕ್ಕ ಪರಿಶೋಧನೆಯಲ್ಲಿನ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು. ಆಂತರಿಕ ಲೆಕ್ಕಪರಿಶೋಧನೆ ಮಾಡುವುದರಲ್ಲಿ ಆಯುಕ್ತರು ಮತ್ತು ಅಧಿಕಾರಿಗಳು ವಿಫಲರಾಗಿರುವುದಕ್ಕೆ ಕಾರಣವನ್ನು ತಿಳಯಬೇಕಾಗಿದೆ ಎಂದು ವಾದ ಮಂಡಿಸಿದರು.
ಬೆಂಗಳೂರು ಐಟಿ ನಗರ ಎಂದು ಹೆಸರು ಪಡೆದಿದೆ. ಆದರೆ, ಪಾಲಿಕೆಯಲ್ಲಿನ ಅವ್ಯವಹಾರಗಳಿಂದಾಗಿ ಸ್ಮಾರ್ಟ್ ಸಿಟಿ ಆಗುವ ಅವಕಾಶ ತಪ್ಪಿದೆ. 2009-10 ಮತ್ತು 2013 ಮತ್ತು 14ರ ಸಿಎಜಿ ವರದಿಯನ್ನು ಪ್ರಸ್ತಾಪಿಸಿದ ವಕೀಲರು, ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಅವ್ಯವಹಾರಗಳಾಗಿವೆ. ಅಲ್ಲದೆ, ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಲೆಕ್ಕ ಪುಸ್ತಕಗಳನ್ನು ನಿರ್ವಹಣೆ ಮಾಡಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, 2015ರ ಅಕ್ಟೋಬರ್ನಲ್ಲಿ ಮುಖ್ಯಮಂತಿ ್ರಗಳಿಗೆ ಪತ್ರ ಬರೆದು ಪಾಲಿಕೆಯಲ್ಲಿ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅವ್ಯವಹಾರಗಳು ನಡೆದಿದೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರು.ಗಳ ನಷ್ಟವಾಗಿದ್ದು ಪರಿಶೀಲನೆ ನಡೆಸುವಂತೆ ಕೋರಿದ್ದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪರಿಶೀಲಿಸುವುದಾಗಿ ಉತ್ತರವನ್ನು ನೀಡಿದ್ದಾರೆ.