(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ರಸಂ, ಸಾಂಬಾರ್ ಸರಿಯಿಲ್ಲ ಎಂದು ಮದುವೆ ಮುರಿದ ವರ!

ರಸಂ ಮತ್ತು ಸಾಂಬಾರ್ ಸರಿಯಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವರನೊಬ್ಬ ಮದುವೆಯನ್ನೇ ಬಿಟ್ಟು ಪರಾರಿಯಾಗಿರುವ ಘಟನೆಯೊಂದು ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ಬುಧವಾರ ನಡೆದಿದೆ...

ಬೆಂಗಳೂರು: ರಸಂ ಮತ್ತು ಸಾಂಬಾರ್ ಸರಿಯಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವರನೊಬ್ಬ ಮದುವೆಯನ್ನೇ ಬಿಟ್ಟು ಪರಾರಿಯಾಗಿರುವ ಘಟನೆಯೊಂದು  ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ಬುಧವಾರ ನಡೆದಿದೆ.

ವಧು ರಾಜು ಎಂಬ ವ್ಯಕ್ತಿಯೇ ಪರಾರಿಯಾದ ವ್ಯಕ್ತಿಯಾಗಿದ್ದು, ಈತ ಬೆಂಗಳೂರಿನ ಶ್ರೀರಾಂಪುರದ ನಿವಾಸಿಯಾಗಿದ್ದಾನೆ. ವಧು ಹಾಗೂ ವರನ ಕಡೆಯವರೂ ಒಂದೇ ಜಾತಿಯವರಾದ್ದರಿಂದ ಇಬ್ಬರೂ ಕಡೆಯ ಕುಟುಂಬದವರು ಮದುವೆಯನ್ನು ಗೊತ್ತು ಮಾಡಿದ್ದರು.

ಕುಣಿಗಲ್ ಪಟ್ಟಣದಲ್ಲಿರುವ ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ನಿನ್ನೆ ಆರತಕ್ಷತೆ ಸಮಾರಂಭದ ನಂತರ ಭೋಜನಕೂಟದಲ್ಲಿ ಭಾಗವಹಿಸಿದ್ದ ವರನ ಸಂಬಂಧಿಕರು ರಸಂ ಹಾಗೂ ಸಾಂಬಾರ್ ಸರಿಯಿಲ್ಲ ಎಂದು ಖ್ಯಾತೆ ತೆಗೆದಿದ್ದಾರೆ. ಇದರಿಂದಾಗಿ ಕಳೆದ ತಡ ರಾತ್ರಿಯಿಂದಲೂ ವಧು-ವರ ಇಬ್ಬರ ಕಡೆಯ ಸಂಬಂಧಿಕರ ನಡುವೆ ಜಗಳವಾಗಿದೆ.

ಈ ವೇಳೆ ರಾಜುವಿನ ಮಲತಾಯಿ ಗೌರಮ್ಮ ಕೂಡ ವಧುವಿನ ಕುಟುಂಬಸ್ಥರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ನಂತರ ವರ ರಾಜು ಮಲತಾಯಿ ಗೌರಮ್ಮಳಿಗೆ ಸಾಥ್ ನೀಡಿ ಮದುವೆ ಮನೆಯಿಂದಲೇ ಪರಾರಿಯಾಗಿದ್ದಾಳೆ. ಘಟನೆಯಿಂದ ತೀವ್ರವಾಗಿ ನೊಂದಿದ್ದ ವಧು ಸೌಮ್ಯಾಳ ಕುಟುಂಬಸ್ಥರು ಸಂಬಂಧಿಕರು ಮದುವೆ ನಿಲ್ಲಲು ಬಿಡದೆ ಸಂಬಂಧಿಕ ಗೋವಿಂದರಾಜು ಎಂಬ ವ್ಯಕ್ತಿಯ ಜೊತೆ ಮದುವೆ ಮಾಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್