ಬೆಂಗಳೂರು: ನಮ್ಮ ಮೆಟ್ರೋದ 2ನೇ ಹಂತದ ಕಾಮಗಾರಿಗಳ ಬಗ್ಗೆ ಬಿಎಂಆರ್ ಸಿಎಲ್ ಸಿದ್ಧಪಡಿಸಿರುವ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ನಂತರ ಬಿಎಂಆರ್ ಸಿಎಲ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ವಿಧಾನಸೌಧದಲ್ಲಿ ಶನಿವಾರ ನಡೆದ ಸಭೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ 2ನೇ ಹಂತದ ಕಾಮಗಾರಿ ಪ್ರಾತ್ಯಕ್ಷಿಕೆ ಪ್ರದರ್ಶಿಸಿದೆ. ಈ ಪ್ರಾತ್ಯಕ್ಷಿಕೆ ಆಧರಿಸಿ ಸಿಲ್ಕ್ ಬೋರ್ಡ್, ಮಾರತ್ತಹಳ್ಳಿ ಸೇರಿದಂತೆ ಸಂಚಾರ ದಟ್ಟಣೆ ಸ್ಥಳಗಳಲ್ಲಿ ಹೇಗೆ ಕಾಮಗಾರಿ ನಡೆಸಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಲಾಗಿದೆ.
2ನೇ ಹಂತದ ಕಾಮಗಾರಿ ಪ್ರದೇಶಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಿ ಕಾಮಗಾರಿ ನಡೆಸಲು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ. ಸಚಿವ ಕೆ.ಜೆ.ಜಾರ್ಜ್, ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕುಮಾರ್ ಸಿಂಗ ಖರೋಲಾ, ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಬಿಡಿಎ ಆಯುಕ್ತ ಶ್ಯಾಂಭಟ್, ಪಾಲಿಕೆ ವಿಶೇಷ ಆಯುಕ್ತ ರವಿಶಂಕರ್ ಇದ್ದರು.