ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ತಲೆಮರೆಸಿಕೊಂಡಿದ್ದ ಕೈದಿಯ ಸೆರೆ

ಪೆರೋಲ್ ಮೇಲೆ ಜೈಲಿನಿಂದ ಹೊರಬಂದು 7 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಕೈದಿಯನ್ನು ಪೀಣ್ಯ ಪೊಲೀಸರು ಬಂಧಿಸಿ ಮತ್ತೆ ಕೃಷ್ಣನ ಜನ್ಮ ಸ್ಥಾನಕ್ಕೆ ಕಳುಹಿಸಿದ್ದಾರೆ...

(ಸಾಂದರ್ಭಿಕ ಚಿತ್ರ)
Manjula VN
Updated On : 1 Feb 2016, 11:59 am

ಬೆಂಗಳೂರು: ಪೆರೋಲ್ ಮೇಲೆ ಜೈಲಿನಿಂದ ಹೊರಬಂದು 7 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಕೈದಿಯನ್ನು ಪೀಣ್ಯ ಪೊಲೀಸರು ಬಂಧಿಸಿ ಮತ್ತೆ ಕೃಷ್ಣನ ಜನ್ಮ ಸ್ಥಾನಕ್ಕೆ ಕಳುಹಿಸಿದ್ದಾರೆ.

ಮೈಸೂರು ಮೂಲದ ಸಂಜಯ್ (31) ಬಂಧಿತ ಕೈದಿ. ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಸಂಜಯ್ (ಕೈದಿ ನಂ-12150) 2007ರ ನ.13ರಿಂದ 28ರವರೆಗೆ ತುರ್ತು ಪೆರೋಲ್ ರಜೆ ಪಡೆದುಕೊಂಡು ಜೈಲಿನಿಂದ ಹೊರಬಂದಿದ್ದನು. ಅವಧಿ ಮುಗಿದರೂ ಕಾರಾಗೃಹಕ್ಕೆ ಶರಣಾಗದೆ, 7 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ. ಈತನಿಗೆ ಪೀಣ್ಯದ ನಾಗಮ್ಮ ಎಂಬುವರು ಪೆರೋಲ್ ಗೆ ಜಾಮೀನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಪೀಣ್ಯ ಠಾಣೆಯಲ್ಲಿ ದಾಖಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement