ಕರಾಟೆ: ಕೊಳ್ಳೇಗಾಲಕ್ಕೆ 19 ಬಹುಮಾನ
ಕೊಳ್ಳೇಗಾಲ: ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕೊಳ್ಳೇಗಾಲ ಶಿಟೋರಿಯನ್ ಕರಾಟೆ ತರಬೇತಿ ಸಂಸ್ಥೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಮೈಸೂರಿನ ಗುಜರಿಯೋ ಕರಾಟೆ ತರಗತಿ ವತಿಯಿಂದ ನಡೆದ ಸ್ಪರ್ಧೆಯಲ್ಲಿ ಕುಮಿತೆ ಫೈಟಿಂಗ್ ವಿಭಾಗದಲ್ಲಿ ಅಂಬರೀಷ್, ಮೋಹನ್, ವೀಣಾ ಪ್ರಥಮ ಬಹುಮಾನ ಗಳಿಸಿದ್ದಾರೆ.
ಆರ್.ಸಾಕ್ಷಿ, ರಾಜು ತೃತೀಯ ಬಹುಮಾನ ಗಳಿಸಿದ್ದಾರೆ. ಕರಾಟಾ ವಿಭಾಗದಲ್ಲಿ ಅರುಣ್, ರಾಜು ಹಾಗೂ ಸಿ.ಎಂ.ಮೋಹನ್ ಪ್ರಥಮ ಬಹುಮಾನ ಪಡೆದಿದ್ದಾರೆ. ಉಳಿದಂತೆ ದೀಪಿಕಾ, ಹೃತ್ವಿಕ್, ಆರ್.ವೀಣಾ, ಸುರೇಶ ದ್ವಿತೀಯ ಮತ್ತು ನಿಖಿಲ್, ಹರ್ಷ, ಸಾಕ್ಷಿ, ಸ್ವರೂಪ, ರಾಜು ತೃತೀಯ ಬಹುಮಾನ ಗಳಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳನ್ನು ಕರಾಟೆ ತರಬೇತುದಾರರು ಪ್ರಶಂಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.