ಮಧುವನಹಳ್ಳಿ ಅಭಿವೃದ್ಧಿಗೆ 2 ಕೋಟಿ: ಧ್ರುವ
ಕೊಳ್ಳೇಗಾಲ: ತಾಲೂಕಿನ ತೀರಾ ಹಿಂದುಳಿದ ದೊಡ್ಡ ಗ್ರಾಮವಾದ ಮಧುವನಹಳ್ಳಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಸುವರ್ಣಗ್ರಾಮ ಯೋಜನೆಯಡಿ 2 ಕೋಟಿ ಬಿಡುಗಡೆಯಾಗಿದೆ ಎಂದು ಸಂಸದ ಆರ್.ಧ್ರುವನಾರಾಯಣ ತಿಳಿಸಿದರು.
ತಾಲೂಕಿನ ಮಧುವನಹಳ್ಳಿ ಗ್ರಾಮದಲ್ಲಿ ಸುವರ್ಣ ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಧುವನಹಳ್ಳಿ ಗ್ರಾಮವು ದೊಡ್ಡ ಗ್ರಾಮವಾಗಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣದ ಅವಶ್ಯಕತೆ ಇದ್ದು, 1 ಸಾವಿರ ನಿವೇಶನ ವಿತರಣೆ ಮಾಡುವ ಅಗತ್ಯವಿದೆ ಎಂದರು.
ಶಾಸಕ ಆರ್.ನರೇಂದ್ರ ಮಾತನಾಡಿ, ಒಂದೂವರೆ ವರ್ಷದಿಂದ ಈ ಗ್ರಾಮದ ಅಭಿವೃದ್ಧಿಗೆ 2 ಕೋಟಿಗೂ ಹೆಚ್ಚಿನ ಅನುದಾನ ನೀಡಲಾಗಿದೆ. ಗ್ರಾಮಸ್ಥರು ಮುಂದಿನ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿದರೆ ಮುಂದೆ 1 ಸಾವಿರ ನಿವೇಶನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಈ ಸಂದರ್ಭದಲ್ಲಿ ಭಾರತ ಆಹಾರ ನಿಗಮದ ಸದಸ್ಯ ಶಿವಕುಮಾರ್, ಜಿಪಂ ಸದಸ್ಯೆ ಶಿವಮ್ಮ, ನಂಜುಂಡಸ್ವಾಮಿ, ಕಾಮರಾಜು, ಶಿವಮೂರ್ತಿ, ಕೆಂಪಯ್ಯ, ತೋಟೇಶ್, ಬಸವರಾಜು, ರಂಗರಾಜು, ಮಾಂಬಳ್ಳಿ ನಂಜುಂಡಸ್ವಾಮಿ, ಯಶಧ, ಶಿವಮೂರ್ತಿ, ನಂಜೇಗೌಡ, ತಾಪಂ ಇಒ ಮಹದೇವಸ್ವಾಮಿ, ದಂಡಾಧಿಕಾರಿ ನಂಜುಂಡಯ್ಯ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.