ಗ್ರೀನ್ ಬಡ್ಸ್ ಸಂಸ್ಥೆ ಬಗೆಗಿನ ಅಪಪ್ರಚಾರಗಳಿಗೆ ಕಿವಿಗೊಡಬೇಡಿ: ಮನವಿ
ಯಳಂದೂರು: ಮೈಸೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಗ್ರೀನ್ ಬಡ್ಸ್ ಆಗ್ರೋಫಾರಂ ಲಿಮಿಟೆಡ್ (ವೈಜ್ಞಾನಿಕ ಕೃಷಿ ಅರಣ್ಯ ಆಧಾರಿತ ಸಂಸ್ಥೆ) ಜನರ ವಿಶ್ವಾಸಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತ ಬಂದಿದ್ದು, ಸಂಸ್ಥೆಯ ವಿರುದ್ಧ ಕೆಲವರು ಮಾಡುವ ಅಪಪ್ರಚಾರಗಳಿಗೆ ಗ್ರಾಹಕರು ಹಾಗೂ ಸಾರ್ವಜನಿಕರು ಕಿವಿಗೊಡಬಾರದೆಂದು ಸಂಸ್ಥೆಯ ಹಿರಿಯ ಮುಖ್ಯ ಸಲಹೆಗಾರ ಷಣ್ಮುಗಸ್ವಾಮಿ ಮನವಿ ಮಾಡಿದರು.
ಅವರು ಪಟ್ಟಣದ ತಮ್ಮ ಸಂಸ್ಥೆಯ ಕಚೇರಿಯಲ್ಲಿ ತಮ್ಮ ಗ್ರಾಹಕರಾದ ಯರಿಯೂರಿನ ರತ್ನಮ್ಮ ಅವರಿಗೆ ಮೆಚುರಿಟಿ ಆದ ಆರ್ಡಿ ಹಣದ ಡಿಡಿ ವಿತರಿಸಿ ಮಾತನಾಡಿ, ಸಂಸ್ಥೆಯು 1999ರಂದು ಆರಂಭವಾಗಿದೆ. ಈ ಸಂಬಂಧ ಹುಣಸೂರು ಪಟ್ಟಣದ ಶಾಖಾ ಕಚೇರಿಯಲ್ಲಿ ಗ್ರಾಹಕರ ಹಣ ಪಂಗನಾಮವಾಗಿದೆ ಎಂದು ಗ್ರಾಹಕರಿಗೆ ತಪ್ಪು ಗ್ರಹಿಕೆಯನ್ನುಂಟು ಮಾಡುವಂತೆ ಪತ್ರಿಕೆಗಳಲ್ಲಿ ಬಿಂಬಿಸಿದ್ದಾರೆ. ಇದು ಸಂಸ್ಥೆಯ ಏಳಿಗೆ ಸಹಿಸದ ಸಂಸ್ಥೆಯ ಗ್ರಾಹಕರಲ್ಲದ ಕೆಲವು ಜನರು ಮಾಡಿರುವ ಆರೋಪ. ಈ ಬಗ್ಗೆ ನಮ್ಮ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಎಲ್.ರವೀಂದ್ರನಾಥ್, ನಿಮ್ಮ ಹಣಕ್ಕೆ ನಾವು ಜವಾಬ್ದಾರರು. ಹಣ ಕೊಡುವುದು ತಡವಾದ್ದರಿಂದ ಇಂಥ ಘಟನೆ ನಡೆದಿದೆ ಎಂದು ಸಾರ್ವನಿಕ ಹಿತದೃಷ್ಟಿಯಿಂದ ಕೆಲವು ಪತ್ರಿಕೆಗಳ ಮೂಲಕ ಮನವಿ ಮಾಡಿದ್ದಾರೆ. ಗ್ರಾಹಕರು ಇಂಥ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಎಂದಿನಂತೆ ಸಂಸ್ಥೆಯ ಜೊತೆ ಕೈಜೊಡಿಸಿ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
ಯಳಂದೂರು ಗ್ರೀನ್ ಬಡ್ಸ್ ಆಗ್ರೋಫಾರಂ ಲಿಮಿಟೆಡ್ ಸಂಸ್ಥೆಯ ಸಹಾಯಕ ವ್ಯವಸ್ಥಾಪಕಿ ಪ್ರಮೀಳಾ, ಹಿರಿಯ ಮುಖ್ಯ ಸಲಹೆಗಾರರಾದ ರಂಗಸ್ವಾಮಿ, ಸಿಬ್ಬಂದಿ ಮಹದೇವಸ್ವಾಮಿ, ಮಂಜುಳಾ, ಪ್ರಕಾಶ,ದೊರೆಸ್ವಾಮಿ, ಅನು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.