ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಾಮರಾಜನಗರ

ಇಂದಿನಿಂದ ಉಚಿತ ಸಿಇಟಿ ತರಬೇತಿ

Parashurama
Updated On : 17 Feb 2013, 12:24 pm

ಯಳಂದೂರು: ಪಟ್ಟಣದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ವತಿಯಿಂದ ಫೆ.17ರಿಂದ ಡಿಇಡಿ ಹಾಗೂ ಟಿಸಿಎಚ್ ಅಭ್ಯರ್ಥಿಗಳಿಗೆ ಉಚಿತವಾಗಿ ಸಿಇಟಿ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ. ಪ್ರತಿದಿನ ಸಂಜೆ 5ರಿಂದ 6 ಘಂಟೆವರೆಗೆ ತರಗತಿ ನಡೆಯುತ್ತದೆ. ಆಸಕ್ತರು ಸಂಘದ ಪ್ರಧಾನ ಕಾರ್ಯದರ್ಶಿ ಶಿವಣ್ಣರಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಮಹದೇವ ತಿಳಿಸಿದ್ದಾರೆ.
ಗುಣಾತ್ಮಕ ಶಿಕ್ಷಣ ಅವಶ್ಯ: ಡಿಡಿಪಿಐ
ಚಾಮರಾಜನಗರ: ಪ್ರಾಥಮಿಕ ಹಂತದಲ್ಲೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕಲಿಸಬೇಕು ಎಂದು ಡಿಡಿಪಿಐ ಎನ್. ಚಂದ್ರೇಗೌಡ ಹೇಳಿದರು. ಅವರು ನಗರದ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಮತ್ತು ಉಪಪ್ರಾಂಶುಪಾಲರ ಸಂಘದ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಶಿಕ್ಷಕರು, ಅವರಿಗೆ ಪ್ರಾಥಮಿಕ ಹಂತದಲ್ಲೇ ಉತ್ತಮ ಶಿಕ್ಷಣ ನೀಡುವ ಹೊಣೆ ಹೊರಬೇಕಿದೆ. ಈಗಾಗಲೇ ಪರೀಕ್ಷಾ ಅವಧಿ ಸಮೀಪಿಸಿದ್ದು, ಹೆಚ್ಚು ಅಂಕ ಗಳಿಸುವತ್ತ ಅವರನ್ನು ಹುರಿದುಂಬಿಸಬೇಕು ಎಂದರು.ಕಚೇರಿ ಉದ್ಘಾಟಿಸಿದ ಶಿಕ್ಷಣ ಇಲಾಖೆಯ ಇಒ ಮಂಜುನಾಥ್ ಮಾತನಾಡಿ, ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿ ಮಾಡಿದೆ. ಇವನ್ನು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪಿಸುವ ಕೆಲಸವನ್ನು ಶಿಕ್ಷಕರು ಮತ್ತು ಉಪನ್ಯಾಸಕರು ಮಾಡಬೇಕು ಎಂದರು. ಸಂಘದ ಅಧ್ಯಕ್ಷ ಚಿಕ್ಕಮಾದಯ್ಯ, ಬಿಇಒ ಅಂದಾನಿ, ತಾಲೂಕು ಅಧ್ಯಕ್ಷ ಜಯಸ್ವಾಮಿ, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ರಾಚಯ್ಯ, ವಿಜಯಕುಮಾರ್, ಲಿಂಗರಾಜು, ಶಿವಣ್ಣ, ಪುಟ್ಟಸ್ವಾಮಿ, ರೇವಣ್ಣಸ್ವಾಮಿ, ಶಿವಕುಮಾರ್, ಜಯರಾಂ ಇದ್ದರು.
ರಥಸಪ್ತಮಿ ಆಚರಣೆ
ಮೈಸೂರು: ಬೋಗಾದಿಯಲ್ಲಿರುವ ಯಾಜ್ಞ ವಲ್ಯ್ಕ ಶುಕ್ಲ ಯಜುರ್ವೇದ ಮಹಾಸಭಾದಲ್ಲಿ ಫೆ. 17ರ ಸಂಜೆ 6ಕ್ಕೆ ರಥಸಪ್ತಮಿ ಆಚರಿಸಲಾಗುವುದು ಎಂದು ಗೌ. ಕಾರ್ಯದರ್ಶಿ ಎನ್. ರಾಮಕೃಷ್ಣ ಶರ್ಮಾ ತಿಳಿಸಿದ್ದಾರೆ.
ಸಮ್ಮೋಹಿನಿ ಶಿಬಿರ
ಮೈಸೂರು: ಕುವೆಂಪುನಗರದ ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರ ಟ್ರಸ್ಟ್‌ನಲ್ಲಿ ಫೆ. 17ರ ಬೆಳಗ್ಗೆ 9.30ಕ್ಕೆ ರೇಕಿ- 1, 2, ಸಮ್ಮೋಹಿನಿ ಚಿಕಿತ್ಸೆ ಹಾಗೂ ಪಿರಾಮಿಡ್ ದಕ್ಷಣೆ ಮೂಲಕ ಪರಿಹಾರ ನೀಡಲು ಶಿಬಿರ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಮೊ. 94496- 96998 ಸಂಪರ್ಕಿಸಬಹುದು.
ಡೆಮೊ ತರಗತಿ
ಮೈಸೂರು: ಸರಸ್ವತಿಪುರಂನಲ್ಲಿರುವ ಏಸ್ ಎಜುಕೇಷನ್ ಟ್ರಸ್ಟ್‌ನಲ್ಲಿ ಫೆ. 17ರ ಮಧ್ಯಾಹ್ನ 12ಕ್ಕೆ ಸಿಇಟಿ ಮತ್ತು ಎನ್‌ಇಇಟಿ ಉಚಿತ ಡೆಮೊ ತರಗತಿ ನಡೆಸಲಿದ್ದು, ಮೊ. 87478- 49060 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement