ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಾಮರಾಜನಗರ

ಗ್ರಾಮ ನೈರ್ಮಲ್ಯತೆಗೆ ಒತ್ತು ನೀಡಿ

Parashurama
Updated On : 17 Feb 2013, 12:23 pm

ಚಾಮರಾಜನಗರ: ತಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಗ್ರಾಮ ನೈರ್ಮಲ್ಯತೆಗೆ ಒತ್ತು ನೀಡಬೇಕು ಎಂದು ಜಿಪಂ ಸಿಇಒ ಎಂ. ಸೋಮಶೇಖರ್ ತಿಳಿಸಿದರು.
ಹರದನಹಳ್ಳಿಯಲ್ಲಿ ನಿರ್ಮಲ ಭಾರತ್ ಅಭಿಯಾನ ಕಾರ್ಯಕ್ರಮ ಕುರಿತು ಮಂಟೇಸ್ವಾಮಿ ದೇವಸ್ಥಾನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಬಯಲಿನಲ್ಲಿ ಮಲ ಮೂತ್ರ ವಿಸರ್ಜನೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವೈಯಕ್ತಿಕ ಹಾಗೂ ಸಾಮೂಹಿಕಢಿ  ಶೌಚಾಲಯ ನಿರ್ಮಿಸಿ ಗ್ರಾಮ ಪರಿಸರವನ್ನು ಕಾಪಾಡಬೇಕು. ಗ್ರಾಪಂ ಮಟ್ಟದಲ್ಲಿ ನಿರ್ವಹಿಸುವ ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮಾಡುವ ಜೊತೆಗೆ, ಕೊಳಚೆ ನೀರು ಹೊರ ಸೇರುವ ಕಡೆಯಿಂದ ಚರಂಡಿ ನಿರ್ಮಿಸಿಕೊಡುವಂತೆ ಗ್ರಾಪಂ ಪ್ರತಿನಿಧಿಗಳಿಗೆ ಸೂಚಿಸಿದರು.
ಜಿಪಂ ಸದಸ್ಯೆ ಕಾವೇರಿ ಶಿವಕುಮಾರ್ ಮಾತನಾಡಿ, ಹರದನಹಳ್ಳಿ ದೊಡ್ಡ ಗ್ರಾಮವಾಗಿದ್ದು, ಗ್ರಾಮದ ಅಭಿವೃದ್ಧಿಗೆ ವಿವಿಧ ಯೋಜನೆಯಡಿ ಹೆಚ್ಚಿನ ಅನುದಾನ ನೀಡಲಾಗಿದೆ. ಗ್ರಾಮಸ್ಥರು ಸದುಪಯೋಗ ಪಡಿಸಿ ಕೊಳ್ಳಬೇಕೆಂದರು.
ಇದಕ್ಕೂ ಮುನ್ನ ಅವರು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಚರಂಡಿ ಹಾಗೂ ರಸ್ತೆ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು. ಅನೇಕ ಕಡೆ ಚರಂಡಿ ನಿರ್ಮಾಣ ಮಾಡಿದ್ದರೂ ನೀರು ಸರಾಗವಾಗಿ ಹೋಗದೆ ಕೊಚ್ಚೆ ಗುಂಡಿಯಂತೆ ನಿಂತಿತ್ತು.  ಗ್ರಾಮದ ದೇವಸ್ಥಾನದ ಮುಂಭಾಗ ಹಾಗೂ ರಸ್ತೆ ಬದಿಯಲ್ಲೇ ಕಸಕಡ್ಡಿ ಹಾಗೂ ತ್ಯಾಜ್ಯ ಬಿದ್ದಿರುವುದು ಕಂಡು ಬಂತು. ಈ ಸಂದರ್ಭದಲ್ಲಿ ಗ್ರಾಮಸ್ಥರು ತಮ್ಮ ಗ್ರಾಮದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು.
ತಾಪಂ ಸದಸ್ಯೆ ಕಾಂತಮಣಿ ಮಹೇಶ್, ಗ್ರಾಪಂ ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷೆ ರೂಪಾ, ಸದಸ್ಯರಾದ ಶಿವಕುಮಾರ್, ತಾಪಂ ಇಒ ಜಯಕೃಷ್ಣ, ಸ್ವಚ್ಛತಾ ಆಂದೋಲನಾಧಿಕಾರಿ ಶಿವಾನಂದ ಸೀಕಲವಾಡಿ, ಸಾಧನ ಸಂಸ್ಥೆಯ ಸುರೇಶ್, ಮೊಬಿಲಿಟಿ ಇಂಡಿಯಾದ ಆನಂದ್, ಶಿಶು ಅಭಿವೃದ್ಧಿ ಅಧಿಕಾರಿ ರೇವಣ್ಣೇಶ್, ಪಿಡಿಒ ಲಕ್ಷ್ಮಣ್, ಗ್ರಾಮದ ನೀಲಶೇಖರ್, ಮಹದೇವಸ್ವಾಮಿ ಹಾಗೂ ಹರದನಹಳ್ಳಿ ಬಂಡಿಗೆರೆ ಗ್ರಾಮಸ್ಥರು ಇದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement