ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಾಮರಾಜನಗರ

ರೈತೋತ್ಸವ: ನಿರ್ಣಯ ಮಂಡನೆ

Parashurama
Updated On : 17 Feb 2013, 12:23 pm

ಚಾಮರಾಜನಗರ: ತಾಲೂಕಿನ ಹೊಂಡರಬಾಳು ಗ್ರಾಮದ ಅಮೃತಭೂಮಿಯಲ್ಲಿ ಫೆ.13ರಿಂದ 16ರವರೆಗೆ ಆಯೋಜಿಸಿದ್ದ ರೈತೋತ್ಸವದ ಕೊನೆಯ ದಿನ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಸಮಾವೇಶದ ನಿರ್ಣಯ ಮಂಡಿಸಿದರು.
ಕೇಂದ್ರ ಸರ್ಕಾರ ರೈತರ ಹಿತಕ್ಕಾಗಿ ಕೃಷಿವೇತನ ಆಯೋಗ ರಚಿಸಬೇಕು. ಮುಂದಿನ ದಿನಗಳಲ್ಲಿ ಭೂ ಸುಧಾರಣಾ ಕಾಯ್ದೆ ಜಾರಿಗೆ ಬರಲಿದ್ದು, ಸಂಸತ್ ಸ್ಥಾಯಿ ಸಮಿತಿಯ ಶಿಫಾರಸನ್ನು ಕೇಂದ್ರ ಸರ್ಕಾರ ಸ್ವೀಕರಿಸಬೇಕು. ಭೂ ಸುಧಾರಣಾ ಕಾಯ್ದೆಯಡಿಯಲ್ಲಿ ಆಹಾರ ಭದ್ರತೆ ಕೃಷಿ ಮೇಲೆ ಅವಲಂಬಿತರಾಗಿರುವ ಜನರ ಭದ್ರತೆ ಹಾಗೂ ಕೃಷಿಗಾಗಿ ಭೂಮಿ ಮೀಸಲಿಡಬೇಕು. ಜಾಗತಿಕ ತಾಪಮಾನದ ದುಷ್ಪರಿಣಾಮದಿಂದಾಗಿ ಮಾನವನ ಜೀವನ ಚಕ್ರವೇ ಬದಲಾಗಿದೆ. ಇದನ್ನು ತಡೆಗಟ್ಟಲು ನೈಸರ್ಗಿಕ ಕೃಷಿಯನ್ನು ಕಡ್ಡಾಯಗೊಳಿಸಬೇಕು. ಸಿರಿಧಾನ್ಯಗಳ ಉತ್ಪನ್ನ ಹೆಚ್ಚಿಸಲು ಕ್ರಮ ವಹಿಸಬೇಕು.
ಜನ ಸಮುದಾಯದ ಅನುಭವ ಮತ್ತು ಸಾಂಪ್ರಾದಾಯಿಕ ಜ್ಞಾನದಿಂದ ರಕ್ಷಿಸಿಕೊಂಡು ಬಂದಿರುವ ದೇಶಿ ಬೀಜ ತಳಿಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಹಾಗೂ ಜಾಗತಿಕ ಬಂಡವಾಳ ಶಾಹಿಯ ಪರಿಣಾಮದ ವಿರುದ್ಧ ಪರ್ಯಾಯ ಕನಸುಗಳೊಂದಿಗೆ ಸ್ಥಾಪಿಸಿರುವ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಅಶಯ ಮುಂದುವರೆಸಲು ಈ ರೈತೋತ್ಸವ ಸಮಾವೇಶದಲ್ಲಿ ನಿರ್ಧರಿಸಲಾಗಿದೆ ಎಂದರು.
ರೈತ ಚಿಂತಕರಾದ ಕೆ.ಎಸ್. ಪುಟ್ಟಣ್ಣಯ್ಯ, ಯುದ್ದವೀರ್ ಸಿಂಗ್, ರಾಜೇಂದ್ರಸಿಂಗ್ ಟಿಕಾಯತ್, ಸುರೇಶ್ ಬಾಬು  ಚಾಮರಸ ಪಾಟೀಲ್, ಚುಕ್ಕಿ ನಂಜುಂಡಸ್ವಾಮಿ, ಮಹೇಶ್ ಪ್ರಭು, ಕಾರ್ಯಕರ್ತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement