ಇಂದು ಮಂಟೆಸ್ವಾಮಿ ಕೊಂಡೋತ್ಸವ
ಯಳಂದೂರು: ತಾಲೂಕಿನ ಯರಿಯೂರು ಗ್ರಾಮದಲ್ಲಿ ಫೆ.18ರ ಬೆಳಗ್ಗೆ 8 ಗಂಟೆಗೆ ಮಂಟೆಸ್ವಾಮಿ ಕೊಂಡೋತ್ಸವ ನಡೆಯಲಿದೆ.ಉಪ್ಪಾರ ಸಮುದಾಯದವರು ಕುರುಬನಕಟ್ಟೆಯಿಂದ ಕಂಡಾಯ ತಂದು ವಿಶೇಷ ದೀಪಾಲಂಕಾರ ಪೂಜೆ ನೆರವೇರಿಸುವರು. ಸೋಮವಾರ ಮುಂಜಾನೆ ಯರಿಯೂರು ಕೆರೆಯಲ್ಲಿ ಮೆರವಣಿಗೆಯಲ್ಲಿ ಬಂದು ಅರ್ಚಕರು ಕೊಂಡ ಹಾಯುತ್ತಾರೆ.
ಇಂದು ಕಾನೂನು ಅರಿವು- ನೆರವು
ಯಳಂದೂರು: ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಚಂದನ ಮಹಿಳಾ ಮಹಾ ಸಂಘ ಸಹಯೋಗದೊಡನೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಪಟ್ಟಣದ ಚಂದನ ಮಹಿಳಾ ಮಹಾ ಒಕ್ಕೂಟದ ಕಚೇರಿಯಲ್ಲಿ ಫೆ. 18ರ ಮಧ್ಯಾಹ್ನ 1.30ಕ್ಕೆ ಆಯೋಜಿಸಲಾಗಿದೆ.
ಇಂದು, ನಾಳೆ ಬಸವೇಶ್ವರ ಉತ್ಸವ
ಚಾಮರಾಜನಗರ: ತಾಲೂಕಿನ ಹರವೆ ಹೋಬಳಿ ಅರಳೀಕಟ್ಟೆ ಗ್ರಾಮದಲ್ಲಿ ಫೆ.18, 19ರಂದು ಜಾತ್ರಾ ಮಹೋತ್ಸವ ಜರುಗಲಿದೆ.
ಫೆ.18ರಂದು ರಾತ್ರಿ 10 ಗಂಟೆಗೆ ಬಸವೇಶ್ವರ ಉತ್ಸವ ಜರುಗಲಿದೆ. ರಾತ್ರಿ 11ಕ್ಕೆ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಥದಲ್ಲಿ ವಿಧಿಯಮ್ಮ ತಾಯಿಯನ್ನು ಬಿಜಂಗೈದು, ವಿಶೇಷ ಪೂಜೆ ನೆರವೇರಿಸಿ ರಥೋತ್ಸವ ನಡೆಯಲಿದೆ. ಫೆ.19ರಂದು ಬೆಳಗ್ಗೆ 10 ಗಂಟೆಗೆ ಚಾಮುಂಡೇಶ್ವರಿ ರಥೋತ್ಸವ ಜರುಗಲಿದೆ. ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಗ್ರಾಮಸ್ಥರು ಪ್ರಕಟಣೆಯಲ್ಲಿ ಕೋರಿದ್ದಾರೆ.