ಎಲ್ಲಾ ವಾರ್ಡ್‌ಗಳಲ್ಲಿ ಬಿಜೆಪಿ ಕಣಕ್ಕೆ
ಕೆ.ಆರ್. ನಗರ: ಇಲ್ಲಿನ ಪುರಸಭೆಗೆ ಮಾ.7 ರಂದು ನಡೆಯುವ ಚುನಾವಣೆಗೆ ಬಿಜೆಪಿಯಿಂದ 23 ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಈ ಹಿಂದೆ ನಡೆದ ಚುನಾವಣೆಗಳಲ್ಲಿ ಈ ಪಕ್ಷದಿಂದ ಏಕೈಕ ಸದಸ್ಯ ಮಾತ್ರ ಮೂರು ಅವಧಿಯಿಂದ ಆಯ್ಕೆಯಾಗುತ್ತಾ ಬಂದಿದ್ದಾರೆ.
ಬಿಜೆಪಿ ಸರ್ಕಾರ ಇದ್ದ ಕಾರಣ, ಐದು ನಾಮಕರಣ ಸದಸ್ಯರನ್ನು ನೇಮಕ ಮಾಡಿ, ಪಟ್ಟಣದಲ್ಲಿ ಬಿಜೆಪಿಯು ಒಟ್ಟು ಆರು ಜನ ಪುರಸಭಾ ಸದಸ್ಯರು ಇರುವುದಾಗಿ ತೋರಿಸಿಕೊಳ್ಳುತ್ತಾ ಬರುತ್ತಿತ್ತು. ಎಲ್ಲಾ ವಾರ್ಡ್‌ಗಳಿಗೂ ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ ಈ ಹಿಂದೆ ಇದ್ದ ಒಂದು ಸ್ಥಾನದ ಜತೆಗೆ ಮತ್ತಷ್ಟು ಸ್ಥಾನಗಳನ್ನು ಗೆದ್ದು ತನ್ನ ಸಾಮರ್ಥ್ಯ ಪ್ರದರ್ಶಿಸಲು ಪಕ್ಷ ಸಜ್ಜಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಬಿಡುಗಡೆಗೊಂಡಿರುವ ಅನುದಾನದ ಬಗ್ಗೆ ಜನರಿಗೆ ತಿಳಿ ಹೇಳುತ್ತಿದ್ದು, ಹೇಗಾದರೂ ಮಾಡಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂದು ಪಣತೊಟ್ಟು ಕಾರ್ಯಕರ್ತರು, ಮುಖಂಡರು ಪ್ರಚಾರದಲ್ಲಿ ತೊಡಗಿದ್ದಾರೆ.
ವಾರ್ಡ್ ನಂ.1. ಜಯಲಕ್ಷ್ಮಿ, 2. ಎಂ.ಕೆ. ನವೀನ, 3. ಸಂತೋಷ್, 4. ಎಂ.ಡಿ. ಶೇಖರ್, 5. ಬಾಲರಾಜ್, 6. ನಂಜುಂಡ, 7. ಗೋವಿಂದರಾಜು, 8. ಉಮಾಶಂಕರ್, 9. ಅರುಣ್‌ಕುಮಾರ್, 10. ರಂಗನಾಥ್‌ರಾವ್, 11. ರೇವಣ್ಣ ಮತ್ತು ಸುಧಾಕರ್, 12. ರತ್ನಮ್ಮ, 13. ಶಶಿಕಲಾ, 14. ಎಸ್.ಪಿ. ರವೀಶ್, 15. ಎನ್. ರವಿ, 16. ವಿಜಯಲಕ್ಷ್ಮಿ, 17. ಗೌರಮ್ಮ ಮತ್ತು ಹೇಮಾವತಿ, 18. ಖಲೀದ್ ಖಾನಂ, 19. ಪಾರ್ವತಮ್ಮ, 20. ಸಲ್ಮಾಬಾನು, 21. ರೋಷನ್‌ಬಾನು, 22. ಕಮಲಮ್ಮ, 23. ರವಿಕುಮಾರ್ ಅವರಿಗೆ ಬಿ. ಫಾರಂ ನೀಡಿದ್ದು, ಎರಡು ವಾರ್ಡ್‌ಗಳಲ್ಲಿ ಇಬ್ಬರಿಗೆ ಬಿ. ಫಾರಂ ನೀಡಲಾಗಿದ್ದು, ತಲಾ ಒಬ್ಬರನ್ನು ನಾಮಪತ್ರ ಹಿಂಪಡೆಯುವಂತೆ ಹೇಳಿದ್ದಾರೆ.