ಕೆಜೆಪಿಯಿಂದ 11 ಮಂದಿ ಕಣಕ್ಕೆ
ಕೆ.ಆರ್. ನಗರ: ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆ ಆಗುತ್ತಿದ್ದಂತೆ ತಾಲೂಕಿನಲ್ಲಿ ಕೆಜೆಪಿ ಸಂಘಟನೆಗೆ ಒತ್ತು ಕೊಟ್ಟು ಅತಿ ವೇಗವಾಗಿ ಪದಾಧಿಕಾರಿಗಳನ್ನು ನೇಮಕ ಮಾಡಿದ್ದು ಅಲ್ಲದೆ, ಈಗಾಗಲೆ ಪಕ್ಷದ ಕಚೇರಿಯನ್ನು ಉದ್ಘಾಟಿಸಿ, ಪಟ್ಟಣದ 23 ವಾರ್ಡ್ಗಳಲ್ಲಿ 11 ವಾರ್ಡ್ಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ವಾರ್ಡ್ ನಂ.4. ಎಂ.ಎಸ್. ಮಹದೇವ್, 6. ಸೋಮಶೇಖರ್ ಮತ್ತು ಮಹದೇವಪ್ಪ, 7.ಕಟ್ಟೆ ಕುಮಾರ್, 8. ರುಕ್ಮಾಂಗದ, 9. ಮಹೇಶ್ಕುಮಾರ್, 13. ಬಿ.ಲೀಲಾವತಿ, 14. ಕೆ.ವಿ. ಶೀಲಾ, 15. ಎಂ. ಲೋಕೇಶ್, 17. ಎಚ್.ಎಲ್. ಶಾರದಾ, 18. ಶಾಹಿದಾಹುಸೇನ್, 22. ಸುಮಿತ್ರಾ ಅವರಿಗೆ ಬಿ. ಫಾರಂ ನೀಡುವ ಮೂಲಕ ಅಧಿಕೃತ ಅಭ್ಯರ್ಥಿಗಳನ್ನಾಗಿ ಮಾಡಿದೆ.