ಮದ್ದೂರು ಗ್ರಾಮದಲ್ಲಿ 1.19 ಕೋಟಿ ಕಾಮಗಾರಿಗೆ ಜಿಎನ್ನೆನ್‌ರಿಂದ ಚಾಲನೆ
ಯಳಂದೂರು: ರಾಜ್ಯ ಬಿಜೆಪಿ ಸರ್ಕಾರ ಗ್ರಾಮಗಳ ಅಭಿವೃದ್ಧಿಗೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಸುವರ್ಣ ಗ್ರಾಮ ಯೋಜನೆಯು ಒಂದಾಗಿದೆ ಎಂದು ಶಾಸಕ ಜಿ.ಎನ್.ನಂಜುಂಡಸ್ವಾಮಿ ತಿಳಿಸಿದರು.
ತಾಲೂಕಿನ ಮದ್ದೂರು ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಮಂಜೂರಾಗಿರುವ 1.19 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಮದ್ದೂರು ಗ್ರಾಮದ ಪ್ರತಿಯೊಂದು ಬಡಾವಣೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಹಲವಾರು ಸಮಸ್ಯೆಗಳು ಕಾಡುತ್ತಿದ್ದು, ಇದನ್ನು ಮನಗಂಡು ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಗೆ ಸೇರ್ಪಡೆ ಮಾಡಲಾಯಿತು.
ಈ ಯೋಜನೆಯಡಿಯಲಿ ಗ್ರಾಮಕ್ಕೆ ಬೇಕಾದ ಸಿ.ಸಿ. ರಸ್ತೆ ಚರಂಡಿ,ಸಮುದಾಯ ಭವನಗಳ ನಿರ್ಮಾಣ, ಕುಡಿಯುವ ನೀರಿನ ಶಾಶ್ವತ ಯೋಜನೆ ಸಮುದಾಯ ಶೌಚಾಲಯಗಳ ನಿರ್ಮಾಣ, ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು.
ಇದನ್ನು ಗ್ರಾಮದ ಎಲ್ಲಾ ಸಮುದಾಯದ ಜನರು ಸದುಪಯೊಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಕಿನಕಹಳ್ಳಿ ಸಿದ್ದರಾಜು. ತಾ.ಪಂ.ಉಪಾದ್ಯಕ್ಷ ರಾಮಚಂದ್ರ, ಗ್ರಾ.ಪಂ.ಸದಸ್ಯರಾದ ನಾಗಣ್ಣ, ಮದ್ದೂರು ವಿರೂಪಾಕ್ಷ, ಎಂಜಿನಿಯರ್ ರವಿ ಇತರರು ಹಾಜರಿದ್ದರು.