'ಕೆಜೆಪಿಯಿಂದ ಪ್ರಬಲ ಪೈಪೋಟಿ'
ಕೊಳ್ಳೇಗಾಲ: ಇತರೆ ಪಕ್ಷಗಳಿಗೆ ಮುಂಬರುವ ಚುನಾವಣೆಯಲ್ಲಿ ಕೆಜೆಪಿ ಪ್ರಬಲ ಪೈಪೋಟಿ ನೀಡಲಿದೆ ಎಂದು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಹೇಳಿದರು.
ಅವರು ತಾಲೂಕಿನ ರಾಮಾಪುರದಲ್ಲಿ ಕೆಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಿದರೆ ಕೆಜೆಪಿ ಗೆಲವು ಸಾಧಿಸಲಿದೆ. ಇದನ್ನು ಕಾರ್ಯಕರ್ತರು ಮನಗಾಣಬೇಕು ಎಂದರು.
ಮುಖಂಡರಾದ ನವೀನ್, ಶ್ರೀನಿವಾಸ, ಶ್ರೀನಿವಾಸಮೂರ್ತಿ ಸೇರಿದಂತೆ ಹಲವರು ಕೆಜೆಪಿ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ನಾಗೇಂದ್ರಬಾಬು, ಚಂದ್ರಕಲಾಬಾಯಿ, ಮುಖಂಡರಾದ ಗೋವಿಂದಪ್ಪ, ಕೃಷ್ಣಮೂರ್ತಿ, ಸಿ.ಎಂ.ರವಿ, ಪಶುಪತಿ, ರವಿ, ವಿಶ್ವ ಇದ್ದರು.