2013-14 ಬಜೆಟ್
ಆದಾಯಮಿತಿಯನ್ನು 2.50 ಲಕ್ಷಕ್ಕೆ ಹೆಚ್ಚಳ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೆವು. 1.80 ಲಕ್ಷ ಆದಾಯ ಮಿತಿಯನ್ನೇ ಮುಂದುವರಿಸಿರುವುದು ನೌಕರ ವರ್ಗಕ್ಕೆ ತೊಂದರೆಯಾಗಿದೆ.
- ಎನ್. ಮಂಜುನಾಥ್, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರು.
ಕೇಂದ್ರ ಸರ್ಕಾರ ಬರಪೀಡಿತ ಪ್ರದೇಶಕ್ಕೆ ವಿಶೇಷವಾಗಿ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ. ಈ ಬಜೆಟ್ ನೀರಸ. ಜನ ಸಾಮಾನ್ಯರಿಗೆ ಇದರಿಂದ ಪ್ರಯೋಜನವಾಗಲ್ಲ.
- ಎಚ್.ಜಿ.ನಾರಾಯಣಸ್ವಾಮಿ, ಗ್ರಾಪಂ ಮಾಜಿ ಉಪಾಧ್ಯಕ್ಷರು, ಬೇಗೂರು.
ಮಹಿಳೆಯರ ನಿರ್ಭಯ ನಿಧಿಗೆ ಸಾವಿರ ಕೋಟಿ ರು. ಮೀಸಲಿಟ್ಟಿರುವುದು ಒಳ್ಳೆಯ ಕಾರ್ಯ. ಮಹಿಳಾ ಬ್ಯಾಂಕ್ ತೆರೆಯುವುದು, ಆರೋಗ್ಯ, ಅಂಗವಿಕಲರಿಗೆ ಈ ಬಜೆಟ್ ಆಶಾದಾಯಕ.
- ಕಬ್ಬಹಳ್ಳಿ ಮಹೇಶ್, ಜಿಪಂ ಮಾಜಿ ಸದಸ್ಯ.
ಜಲಾನಯನ ಇಲಾಖೆಗೆ ಹೆಚ್ಚಿನ ಅನುದಾನ ನೀಡಿರುವ ಜೊತೆಗೆ ಗ್ರಾಮ ಸಡಕ್ ಯೋಜನೆಗೆ ಸಾವಿರಾರು ಕೋಟಿ ರು.ಗಳನ್ನು ಹೆಚ್ಚಿಸಿರುವುದರಿಂದ ಉತ್ತಮ ರಸ್ತೆಗಳು ನಿರ್ಮಾಣವಾಗಲಿದೆ. ಇದೊಂದು ಉತ್ತಮ ಬಜೆಟ್ ಆಗಿದೆ.
- ಡಿ.ಸಿ.ನಾಗೇಂದ್ರ, ಜಿಪಂ ಸದಸ್ಯರು.
ಹಣಕಾಸು ಸಚಿವ ಪಿ.ಚಿದಂಬರಂ ಮಂಡಿಸಿದ ಬಜೆಟ್ನಿಂದ ರೈತರಿಗೆ ಯಾವುದೇ ಹೆಚ್ಚಿನ ಅನುಕೂಲವಾಗಿಲ್ಲ. ಶಿಕ್ಷಣಕ್ಕೆ ಒತ್ತು ನೀಡಿದಂತೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿಲ್ಲ.
- ಕೆ.ಆರ್.ಲೋಕೇಶ್, ರೈತ ಮುಖಂಡರು.
ಶಿಕ್ಷಣ, ಆರೋಗ್ಯ ಮಹಿಳಾ ಬ್ಯಾಂಕ್ ಗ್ರಾಮ ಸಡಕ್ ಯೋಜನೆಗೆ ಮಹತ್ವ ನೀಡಿರುವುದು ಸ್ವಾಗತಾರ್ಹ. ಯುವಶಕ್ತಿ ಸದ್ಬಳಕೆಗೆ ಹೆಚ್ಚಿನ ಆದ್ಯತೆ ನೀಡದಿರುವುದು ವಿಪರ್ಯಾಸ.
- ಸುರೇಶ್ ಎನ್ ಋಗ್ವೇದಿ, ಚಾಮರಾಜನಗರ.
ಬಡವರಿಗೆ, ಮಧ್ಯಮ ವರ್ಗದವರಿಗೆ ಅನುಕೂಲವಾಗುವ ರೀತಿ ಯಾವ ಯೋಜನೆಯನ್ನೂ ಜಾರಿ ಮಾಡಿಲ್ಲ. ಜೊತೆಗೆ ರೈತರು ಬೆಳೆದ ಆಹಾರ ಪದಾರ್ಥಗಳಿಗೆ ಬೆಂಬಲ ಬೆಲೆ ನಿಗದಿಗೊಳಿಸಿಲ್ಲ.
- ಮಂಜುನಾಥ್, ಯಳಂದೂರು.
ಕೈಗಾರಿಕೆಗಳಿಗೆ ಮತ್ತು ರಿಯಲ್ ಎಸ್ಟೇಟ್ ಮಾಡುವವರಿಗೆ ಆದ್ಯತೆ ನೀಡಿದ್ದಾರೆ. ಇದು ಜನಸಾಮಾನ್ಯರನ್ನು ಶೋಷಣೆ ಮಾಡುವ ಬಜೆಟ್ ಆಗಿದೆ.
- ಪ್ರೊ. ಸುಬ್ಬುಕೃಷ್ಣ, ಭಾಷಾ ಸಂಸ್ಕೃತಿ ಇಲಾಖೆ.
ಕೇಂದ್ರ ಸರ್ಕಾರ ಎಸ್ಸಿಎಸ್ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಮುಂಗಡ ಇಟ್ಟಿದೆ. ಅದು ಜನ ಸಾಮಾನ್ಯರಿಗೆ ತಲುಪುವ ಕೆಲಸವಾಗಬೇಕು.
- ಶ್ರೀನಿವಾಸ್ ನಾಯಕ, ಪಪಂ ಮಾಜಿ ಸದಸ್ಯ, ಯಳಂದೂರು.
ಸಣ್ಣ ಹಿಡುವಳಿದಾರ ರೈತರಿಗೆ ರಿಯಾಯಿತಿ ದರದಲ್ಲಿ ರಸಗೊಬ್ಬರ ನೀಡದೆ, ಕೈಗಾರಿಕಾ ಕ್ಷೇತ್ರಕ್ಕೆ ಆದ್ಯತೆ ನೀಡುವ ಮೂಲಕ ರೈತರನ್ನು ಜೀವಂತ ಸಮಾಧಿ ಮಾಡುವ ಬಜೆಟ್ ಇದಾಗಿದೆ.
- ನಾಗರಾಜು, ರೈತ ಮುಖಂಡ, ವೈ,ಕೆ. ಮೋಳೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.