ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಾಮರಾಜನಗರ

ಎಷ್ಟು ಸ್ಥಾನ ಗೆದ್ರೂ ಸಾಧನೆಯೇ: ರಾಮಚಂದ್ರ

Parashurama
Updated On : 28 Feb 2013, 10:22 am

ಚಾಮರಾಜನಗರ: ಬಿಎಸ್‌ಆರ್ ಹೊಸ ಪಕ್ಷವಾದ್ದರಿಂದ ಅದು ಎಷ್ಟು ಸ್ಥಾನ ಗೆಲ್ಲುತ್ತದೆಯೋ ಅದೇ ಅದರ ಸಾಧನೆ ಎಂದು ಬಿಎಸ್‌ಆರ್ ಜಿಲ್ಲಾಧ್ಯಕ್ಷ ಎಂ. ರಾಮಚಂದ್ರ ಹೇಳಿದರು.
ಅವರು ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಎಸ್‌ಆರ್ 9 ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿದೆ. 109 ವಾರ್ಡ್‌ಗಳಲ್ಲಿ 52 ಸ್ಥಾನಗಳಿಗೆ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಲಾಗಿದೆ. ಬಿಎಸ್‌ಆರ್ ನಿರೀಕ್ಷೆಗೂ ಮೀರಿ ಸ್ಥಾನ ಗಳಿಸಿದರೆ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು ಎಂದರು.
ನಗರಸಭೆಯ 9, 6, 12ನೇ ವಾರ್ಡ್‌ಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಪಕ್ಷೇತರರಿಗೆ ಪಕ್ಷದ ವತಿಯಿಂದ ಬೆಂಬಲ ನೀಡಲಾಗುತ್ತದೆ. ಮುಂಬರುವ ವಿಧಾನಸಭೆ ಚುನಾವಣೆ ಹೊತ್ತಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವೈಫಲ್ಯವನ್ನು ಮತದಾರರಿಗೆ ತಿಳಿಸುವ ಮೂಲಕ ಅಧಿಕಾರಕ್ಕೆ ಬರುವುದೇ ಗುರಿ ಎಂದರು.
ಕಾಲಾವಕಾಶದ ಕೊರತೆ: ಕೆಎಂಪಿ ಜಿಲ್ಲಾಧ್ಯಕ್ಷ ಕೆ.ವೀರಭದ್ರಸ್ವಾಮಿ ಮಾತನಾಡಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಲಾವಕಾಶ ಕಡಿಮೆಯಿತ್ತು. ಹಾಗಾಗಿ 10 ಮಂದಿಯನ್ನು ಕಣಕ್ಕಿಳಿಸಿದ್ದು, 7 ಮಂದಿ ಪಕ್ಷೇತರರು ಕಣದಲ್ಲಿದ್ದಾರೆ. ಈಗಾಗಲೇ ಅಶೋಕ್ ಖೇಣಿ ನೇತೃತ್ವದ ಕರ್ನಾಟಕ ಮಕ್ಕಳ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರು.
6 ತಿಂಗಳಲ್ಲಿ 40 ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಾಪನೆಗೆ ಯೋಜನೆ ಹಾಕಿಕೊಳ್ಳಲಾಗಿದೆ. ಘಟಕ ನಿರ್ಮಿಸಲು ನಗರದಲ್ಲಿ ಜಾಗ ಗುರುತಿಸಿದ್ದು, ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಸಿದ್ಧವಾಗಲಿದೆ. ಕಾಗಲವಾಡಿ, ಬ್ಯಾಡಮೂಡ್ಲು ಹಾಗೂ ಕರಿನಂಜನಪುರದಲ್ಲಿ ಕೊಳವೆಬಾವಿ ಕೊರೆಸಿ 2ಕ್ಕೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಅಧಿಕಾರಕ್ಕೆ ಬಂದರೂ ಅಭಿವೃದ್ಧಿ ಕಾರ್ಯ ಮಾಡುತ್ತೇವೆ. ಬಾರದಿದ್ದರೂ ಮಾಡುತ್ತೇವೆ. ಮತದಾರರು ಪಕ್ಷದ ಕಾರ್ಯಕ್ರಮಗಳನ್ನು ನೋಡಿ ಆಶೀರ್ವದಿಸಿದರೆ 10 ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದರು.
ನಮ್ಮದು ಹೋರಾಟದ ಹಾದಿ: ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ರಾರ್ ಅಹಮದ್ ಮಾತನಾಡಿ, 9 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ವಿಶೇಷ ಎಂದರೆ ಎಲ್ಲ ವಾರ್ಡಿಗೂ ಸುಶಿಕ್ಷಿತರನ್ನೇ ಕಣಕ್ಕಿಳಿಸಿದ್ದೇವೆ. ನಾವು ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿಲ್ಲ. ನಾವು ಸೋತರೂ ಹೋರಾಟ, ಗೆದ್ದರೂ ಹೋರಾಟ. ಜನಸೇವೆಯೇ ನಮ್ಮ ಗುರಿ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಪ್ರತಿ ವಾರ್ಡಿನಲ್ಲೂ ಗ್ರಂಥಾಲಯ, ನಗರಸಭೆಯ ದಾಖಲಾತಿಗಳ ಕಂಪ್ಯೂಟರೀಕರಣ, ಪ್ರತಿ 3 ತಿಂಗಳಿಗೊಮ್ಮೆ ವಾರ್ಡ್‌ವಾರು ಸಭೆ, ನಗರಸಭಾ ಆಸ್ತಿಯ ರಕ್ಷಣೆ, ಅಂಗವಿಕಲರ ಶೇ.3ರ ಅನುದಾನ ಬಳಕೆಗೆ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments