ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಾಮರಾಜನಗರ

ವ್ಯಕ್ತಿ ಸಾವು; ಕೊಲೆ ಸಂಶಯ

Parashurama
Updated On : 28 Feb 2013, 10:23 am

ಹನೂರು: ಪಾಳು ಬಿದ್ದ ಜಮೀನೊಂದರಲ್ಲಿ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸಮೀಪದ ಕಾಮಗೆರೆ ಮತ್ತು ಬೂದುಬಾಳು ರಸ್ತೆ ಬಳಿ ನಡೆದಿದೆ.
ಮೃತ ವ್ಯಕ್ತಿಯು ಬೂದುಬಾಳು ಗ್ರಾಮದ ತಿಮ್ಮದಾಸು (35) ಎಂಬ ನಿವಾಸಿಯಾಗಿದ್ದಾನೆ.
 ಈತ ಗಾರೆ ಕೆಲಸಗಾರನಾಗಿದ್ದು ಬುಧವಾರ ಕೆಲಸಕ್ಕೆ ಹೋದ ವ್ಯಕ್ತಿ ಗುರುವಾರ ಬೆಳಿಗ್ಗೆ ಜಮೀನೊಂದರಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ.
ಮೃತನಿಗೆ ಒಂಭತ್ತು ವರ್ಷದ ಹಿಂದೆ ಚೆನ್ನಾಲಿಂಗನ ಹಳ್ಳಿಯ ಗೀತಾ ಎಂಬುವವರ ಜೊತೆ ವಿವಾಹವಾಗಿದ್ದು,  ಮೂವರು ಹೆಣ್ಣು ಮಕ್ಕಳಿದ್ದಾರೆ.
ಘಟನೆ ನಡೆದಿರುವ ಸ್ಥಳಕ್ಕೆ ಡಿವೈಎಸ್ಪಿ ಚೆನ್ನಬಸವಣ್ಣ, ಇನ್ಸೆಪೆಕ್ಟರ್ ರಾಜಣ್ಣ ಹಾಗೂ ಸಿಬ್ಬಂದಿ ಭೇಟಿ ನೀಡಿ ಸ್ಥಳಕ್ಕೆ ಶ್ವಾನ ದಳವನ್ನು ಕರೆಯಿಸಿ ಪರಿಶೀಲಿಸಿದರು.
 ಹನೂರು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಏಜಾಜುಲ್ಲಾಖಾನ್ ನೇತೃತ್ವದಲ್ಲಿ ಮೃತನ ಶವಪರೀಕ್ಷೆ ನಡೆಸಲಾಯಿತು. ಈತನ ಪತ್ನಿ ಗೀತಾ ಪತಿಯ ಸಾವಿಗೆ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments