ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಾಮರಾಜನಗರ

ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ

Parashurama
Updated On : 29 Jan 2013, 12:23 pm

ಚಾಮರಾಜನಗರ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 2ನೇ ಅವಧಿಗೆ ನೂತನ ಅಧ್ಯಕ್ಷರಾಗಿ ಸಿ.ರಾಜಶೇಖರ್ ಆಲ್ದೂರ್, ಉಪಾಧ್ಯಕ್ಷರಾಗಿ ಯಳಂದೂರಿನ ವೈ.ಎಲ್.ಶಿವಸ್ವಾಮಿ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಸಿ.ರಾಜಶೇಖರ್ ಆಲ್ದೂರ್, ಚಾಮರಾಜನಗರ ಎಪಿಎಂಸಿ ಯಾರ್ಡ್‌ನ ಪ್ರಮುಖ ವ್ಯಾಪಾರಗಳಾದ ಬೆಲ್ಲ ಮತ್ತು ಅರಿಶಿಣ ಮಾರುಕಟ್ಟೆ ಹಾಗೂ ತರಕಾರಿ ಮಾರುಕಟ್ಟೆಯನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ಹಾಗೂ ಸಂತೇಮರಳ್ಳಿ ಉಪಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುತ್ತೇವೆ. ಯಳಂದೂರು ನಮ್ಮ ಮಾರುಕಟ್ಟೆಗೆ ಸೇರಿರುವುದರಿಂದ ಯಳಂದೂರಿನಲ್ಲಿ ಸರ್ಕಾರದಿಂದ ನಿವೇಶನ ಗುರುತಿಸಿ ಶೀಘ್ರದಲ್ಲಿ ಮಾರುಕಟ್ಟೆ ಪ್ರಾರಂಭಿಸುವುದಾಗಿ ತಿಳಿಸಿದರು.
ಎಪಿಎಂಸಿ ನಿರ್ದೇಶಕರಾದ ಬಿ.ರತ್ನಮ್ಮ, ಬಸವರಾಜು, ಗಿರೀಶ್, ಪುರುಷೋತ್ತಮ್, ದಳಪತಿ ವೀರತ್ತಪ್ಪ, ರಾಜಣ್ಣ, ಶಿವಕುಮಾರ್, ಎಲ್.ಸುರೇಶ್, ಮಾದಪ್ಪ ಮತ್ತು ಅಮಚವಾಡಿ ಲಿಂಗರಾಜು, ಮಾಜಿ ಗ್ರಾಪಂ ಅಧ್ಯಕ್ಷ ಬಿ.ಎಮ್.ಕೆ.ಹುಂಡಿ ಮಹದೇವ್, ಬೀರೇಶ್, ಆಡಿಟರ್ ಎಂ.ನಾಗಸುಂದರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments