ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಾಮರಾಜನಗರ

ಲೇಖಕ ನಂದಿ ಹೇಳಿಕೆಗೆ ಆಕ್ರೋಶ

Parashurama
Updated On : 29 Jan 2013, 12:16 pm

ಚಾಮರಾಜನಗರ: ದಲಿತರು, ಹಿಂದುಳಿದ ವರ್ಗದವರು ಹೆಚ್ಚಾಗಿ ಭ್ರಷ್ಟಾಚಾರದಲ್ಲೇ ತೊಡಗಿದ್ದಾರೆಂಬ ಲೇಖಕ, ವಿಚಾರವಾದಿ ಆಶೀಶ್ ನಂದಿ ಅವರ ಹೇಳಿಕೆ ಖಂಡಿಸಿ, ಜಿಲ್ಲಾ ಭ್ರಷ್ಟಾಚಾರ ವಿರೋಧಿ ಆಂದೋಲನ ವೇದಿಕೆಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ನಂದಿ ಪ್ರತಿಕೃತಿ ದಹನ ಮಾಡಿದರು.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳು ಮಾತನಾಡಿ, ರಾಜಸ್ತಾನದ ಜೈಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ, ವಿಚಾರವಾದಿ ಆಶೀಶ್ ನಂದಿ ಅವರು, ದಲಿತರು ಹಿಂದುಳಿದ ವರ್ಗದವರಿಂದಲೇ ಭ್ರಷ್ಟಾಚಾರ ನಡೆಯುತ್ತಿದ್ದು, ಮೇಲ್ಪರ್ಗದವರು ಇದರಿಂದ ಹೊರತಾಗಿದ್ದಾರೆ. ಈ ಸಂಬಂಧ ಪಶ್ಚಿಮ ಬಂಗಾಳವು ಭ್ರಷ್ಟಚಾರಕ್ಕೆ ಎಡೆ ಮಾಡಿಕೊಡದೆ ಶುದ್ಧವಾಗಿ ಆಡಳಿತ ನಡೆಸಿದೆ. ಅಲ್ಲಿ ತಳವರ್ಗದವರಿಗೆ ಅಧಿಕಾರ ನೀಡದೇ ಇರುವುದೇ ಕಾರಣ ಎಂದು ಹೇಳಿಕೆ ನೀಡಿರುವುದು ಜಾತಿಕಲಹಕ್ಕೆಡೆ ಮಾಡಿಕೊಟ್ಟಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಅದರ ಬಗ್ಗೆ ಇವರು ಮಾತನಾಡದೆ ಮೆದು ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಆಶೀಶ್ ನಂದಿ ಕ್ಷಮೆ ಯಾಚಿಸಬೇಕು. ಇಂಥ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಸಮುದ್ರ ಸುರೇಶ್, ಜಂಟಿ ಕಾರ್ಯದರ್ಶಿ ಬದನಗುಪ್ಪೆ ಮಹೇಶ್, ತಾಲೂಕು ಅಧ್ಯಕ್ಷ ಉಮ್ಮತ್ತೂರು ಚಂದ್ರು, ಬಣ್ಣಾರಿ ಮಹೇಶ್, ಶಿವಣ್ಣ, ಸೋಮಶೇಖರ್, ಮಂಜು, ನಾಗರಾಜೇಗೌಡ, ಗುರುಸಿದ್ದು, ಈಶ್ವರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments