ಹೊತ್ತಿ ಉರಿದ ಹುಲ್ಲಿನ ಲಾರಿ
ಹಾಸನ: ನಗರ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಭಾನುವಾರ ಹುಲ್ಲಿನ ಲಾರಿಯೊಂದಕ್ಕೆ ಬೆಂಕಿ ತಗುಲಿ ಧಗಧಗನೆ ಹೊತ್ತಿ ಉರಿದಿದೆ.
ಅಪಾರ ನಷ್ಟ ಸಂಭವಿಸಿದೆ. ಲಾರಿ ಚಾಲಕನ ಧೈರ್ಯ ಹಾಗೂ ಮುಂಜಾಗರೂಕತೆಯಿಂದ ಹೆಚ್ಚಿನ ಹಾನಿ ತಪ್ಪಿದೆ.
ಬೆಂಕಿ ತಗುಲಿದ್ದು ತಿಳಿದ ತಕ್ಷಣ ಸಮಯ ಪ್ರಜ್ಞೆ ಮೆರೆದ ಚಾಲಕ ಲಾರಿಯನ್ನು ಹೆದ್ದಾರಿಯಿಂದ ಹೊರಭಾಗಕ್ಕೆ ತಂದು ನಿಲ್ಲಿಸಿದ. ಸ್ಥಳೀಯರು ಕೂಡಲೆ ನೀರು ಎರಚಿ, ಅಕ್ಕಪಕ್ಕದ ನೀರಿನ ಮೂಲಗಳನ್ನು ಬಳಸಿ ಪೈಪುಗಳ ಮೂಲಕ ನೀರು ಹರಿಸಿ ಲಾರಿಯಲ್ಲಿನ ಬೆಂಕಿ ಆರಿಸಲು ನೆರವಾದರು.
ಆನಂತರ ಆಗಮಿಸಿದ ಅಗ್ನಿ ಶಾಮಕ ವಾಹನ ಬೆಂಕಿ ಸಂಪೂರ್ಣ ನಂದಿಸುವಲ್ಲಿ ಯಶಸ್ವಿಯಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.